-
Bhagyada Lakshmi baramma
Composer : Shri Purandara dasaru ಭಾಗ್ಯಾದಾ ಲಕ್ಷ್ಮೀ ಬಾರಮ್ಮನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ || ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ ಗೆಜ್ಜೆಯ ಕಾಲಿನ ನಾದವ ತೋರುತಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ (೧) ಕನಕ ವೃಷ್ಟಿಯ ಕರೆಯುತ ಬಾರೆ ಮನಕಾಮನದಾ ಸಿದ್ಧಿಯ ತೋರೆದಿನಕರ ಕೋಟಿ ತೇಜದಿ ಹೊಳೆಯುವ ಜನಕ ರಾಯನ ಕುಮಾರಿ ಬಾರೆ (೨) ಅತ್ತಿತ್ತಗಲದೆ ಭಕ್ತರ ಮನೆಯೊಳು ನಿತ್ಯ ಮಹೋತ್ಸವ ನಿತ್ಯ ಸುಮಂಗಳಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ…
