-
Vedavyasara Divya paada
Composer : Shri Karpara narahari dasaru ವೇದವ್ಯಾಸರ ದಿವ್ಯಪಾದ ಪದುಮಯುಗಲಆರಾಧಿಸುತಿರು ಮನುಜಾ ||ಪ|| ವೇದಗಳಿಗೆ ಸಮ್ಮತವಾದ ಪುರಾಣಗಳಸಾದರದಲಿ ರಚಿಸಿ ಮೋದವ ಬೀರಿದ ||ಅ.ಪ|| ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದುಸುರಮುನಿ ಪ್ರಾರ್ಥನದಿಪರಮ ಮಂಗಲ ವೀರವರ ಭಾಗವತ ಗ್ರಂಥವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||೧|| ವಾಸಿಪ ಮುನಿಗುಣ ಭೂಷಿತ ಬದರಿಯೋಳ್ತೋಷ ತೀರ್ಥರ ಕರೆದುಭೂಸುರ ಜನರಿಗೆ ಮೋಕ್ಷದಾಯಕ ಸೂತ್ರಭಾಷ್ಯವ ರಚಿಸೆಂದಾದೇಶವ ನೀಡಿದ ||೨|| ಅರಿದರಾದ್ಯಯುಧ ಧರಿಸಿ ಷೋಡಶ ಸಂಖ್ಯಕರಗಳಿಂದಲಿ ಶೋಭಿತಶರಣು ಜನಕೆ ಸುರತರು ವೆನಿಸಿ ಧರೆಯೊಳುಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||೩||…
-
Idu enu vesha
Composer : Shri Mohana dasaru ಇದು ಏನು ವೇಷ ವೇದವ್ಯಾಸಭಾನು ಕೋಟಿ ಪ್ರಕಾಶ ಬದರಿ ನಿವಾಸ ||ಅ.ಪ|| ಮುತ್ತು ಮಾಣಿಕ್ಯ ನವರತ್ನ ಕಿರೀಟವಿರೆನೆತ್ತಿಯೊಳಗೆ ಜಡೆ ಪೊತ್ತು ಕೊಂಡಿಪ್ಪುದು ||೧|| ದ್ರೌಪದಿ ಕರೆಯಲು ದಿವ್ಯ ವಸ್ತ್ರವನಿತ್ತೆಕೌಪಿನ ಧರಿಸಿದ ಕೌತುಕ ತಿಳಿಯದು ||೨|| ವರ ವೈಕುಂಠ ಬಿಟ್ಟು ಮೋಹನ ವಿಠಲಧರೆಯೊಳು ಬೋರೆಯ ಮರದಡಿ ಇರುವುದು ||೩|| idu Enu vESha vEdavyAsabhAnu kOTi prakAsha badari nivAsa ||a.pa|| muttu mANikya navaratna kireeTavirenettiyoLage jaDe pottu koMDippudu…
-
Madhwantargata vedavyasa
Composer : Shri Vadirajaru ಮಧ್ವಾಂತರ್ಗತ ವೇದವ್ಯಾಸ ಕಾಯೊಶುದ್ಧ ಮೂರುತಿಯೆ ಸರ್ವೇಶ ||ಪ||ಶ್ರದ್ಧೆಯಿಂದಲಿ ನಿನ್ನ ಭಜಿಪ ಭಕ್ತಗೆಬುದ್ಧ್ಯಾದಿಗಳ ಕೊಟ್ಟು ಉದ್ಧರಿಸೋ ದೇವರ ದೇವ ||ಅ.ಪ|| ದ್ವಾಪರದಲಿ ಒಬ್ಬ ಮುನಿಪ ತನ್ನ ಕೋಪದಿಂದಲಿ ಕೊಟ್ಟ ಶಾಪಶಾಪಿಸಲು ಜ್ಞಾನ ಲೋಪ ವಾಗೆ, ಅಪಾರ ತತ್ತ್ವಸ್ವರೂಪಶ್ರೀಪತಿಯೇ ಕಾಯೆಂದು ಮೊರೆಯಿಡೆ ಪಾಪ ವಿರಹಿತಳಾದ ಯಮುನೆಯದ್ವೀಪದಲಿ ಅಂಬಿಗರ ಪೆಣ್ಣಿನ ರೂಪಗೊಲಿದವನಲ್ಲಿ ಜನಿಸಿದೆ || ೧ || ವೇದವಾದಿಗಳೆಲ್ಲ ಕೆಡಲು ತತ್ತ್ವ-ವಾದಿ ಜನರು ಬಾಯ ಬಿಡಲುಮೇದಿನಿ ಸುರರು ಮೊರೆಯಿಡಲು , ನಾನಾ ವೇದ ವಿಭಾಗ ರಚಿಸಲುಮೋದದಿಂದ…
