Prasannavenkata dasaru

  • Varamahalakumi deviye kaye

    Composer : Shri Prasannavenkata dasaru ವರಮಹಾಲಕುಮಿದೇವಿಯೆ ಕಾಯೆ [ಪ] ಸೌರನಗರ ನೆಲೆವಾಸಿ ಮಹಾಮಾಯೆ [ಅ.ಪ] ಸಗರಾಜನುದರದಲಿ ಜನಿಸಿ |ಸಗ್ಗಿಗರರಸನ ತ್ವರದಲಿ ವರಿಸಿ |ನಿಗಮಾಗಮಕತಿ ವೇದ್ಯಳೆನಿಸಿ |ಜಗಕತಿ ಪಾವನ ನಗರ ನೆಲೆವಾಸಿಶ್ರೀ [೧] ನಿತ್ಯ ಮುಕುತೆ ನಿಜ ಭಕುತ ಪ್ರೀಯಳೆ |ಪುತ್ತಿಗೆ ರಾಮರ ಚಿತ್ತದಿ ಪೊಳೆವಳೆ ||ತೆತ್ತೀಸ ಕೋಟಿ ದೇವರ್ಕಳ ಕಾಯ್ವಳೆ |ನೃತ್ಯ ಮನೋಹರಿ ಸತ್ಕಥಾರ್ಥಿತಳೆ ಶ್ರೀ [೨] ಮಹಿಜೆ ಮಹಾಮಂತ್ರರಾಜನ ರಾಣಿ |ಮಹಾಮಹಾಂತರಭಿಮಾನಿ ಕನ್ಯಾಮಣಿ ||ಶ್ರೀಹರಿ ಮಹೋರದಲ್ಲಿಹ ಹೃನ್ಮಣಿ |ಮಹಿತ ಶ್ರೀಪ್ರಸನ್ನವೆಂಕಟನ ಗೃಹಖಣಿ ಶ್ರೀ [೩]…

  • Svaramanana ramani

    Composer : Shri Prasannavenkata dasaru ಸ್ವರಮಣನ ರಮಣಿ ತ್ರಿವೇಣಿ |ಸ್ಫುರಣ ಶ್ರೀಹರಿ ಚರಣಧಾರಿಣಿ [ಪ] ಕಲುಷಾಪಹಾರಿಯೆ ಜಲಚರಾನ್ವೇಷಣಲುಬ್ದೆ |ನಿಲಿಸೆನ್ನ ಹೃತ್ತೋಯಜದೊಳ್ ವಳ ಹೊರಗೂ |ನಳಿನನಾಭನ ನೆನೆವ ತಿಳಿಚಿತ್ತ ನಿರ್ಮಲೆ |ವಿಲಾಶೇಯಮಭಿಲಾಷಿಣಿ ಬುಧಶ್ರೇಣಿ [೧] ಉದದಿರಾಜನತೀ ಪ್ರೀತಿಯಾ ಪುತ್ರಿ |ಮದನಾರಿ ಜಟಜಸೂನೆ ಪಾಪೌಘ ದಹನೆ |ಪದಾಬ್ಜ ಪದುಮಕೆನ್ನನು ಭ್ರಮರನೆನಿಸಿ |ಉದದಿ ಮಥನನ ಪದ ಪದುಮವತೋರೆ [೨] ಹರೀತೋಷಲಾಭೆ ಸುಂದರಿ ಸುಭಗೆ |ದರುಶನ ಮಾತ್ರದಿ ತ್ರಿಕರಣ ಶುದ್ಧೀವೆ |ಹಿರಿಪಿಂಗಳಾಧಿಷ್ಠಿತೆ ದೇವಿ ಜಗನ್ಮಾತೆ |ತುರಗಗತಿ ಪ್ರಸನ್ವೆಂಕಟರಾಯನ್ನದಾಯಿತೆ [೩] svaramaNana ramaNi…

  • Baare bhagyadarasi

    Composer : Shri Prasannavenkata dasaru ಬಾರೇ ಭಾಗ್ಯದರಸಿ | ಭವದಘ ಹರಿಸಿ |ಹರಸು ಬಾ ಹರಿಚರಣ ತೋರಿಸಿ [ಪ] ಜಾಂಬೂನದಾಂಬರದೋಳ್ ಪೊಳೆವಂಭ್ರಣಿ |ಶಂಭೋ ಸುರರಿಂಬಿಡುವ ಸಂಭ್ರಮಿ |ಅಂಬುಜ ಸಂಭವ ಪೊಂಬನ ಜನನಿ |ಇಂಬುದೋರು ಕುಂಬಿಣಿಜಾಮಣಿ [೧] ಮನ್ಮಥ ಜನಕನನ್ಯ ಭಜಿಪಗುಣ |ಸನ್ನುತ ರೂಪ ಕೊಂಡಾಡಿ ಪಾಡುವಗೆ |ಹೃನ್ಮನದೋಳಿಹ ಬಿಂಬಮೂರ್ತಿಯಾ |ಕಣ್ಮನ ಸೆಳೆವಂತೆ ತೋರಿ ಪೊರೆಯೆಯಾ [೨] ದಯವಾರುಧಿ ಭವ ಭಯ ದೂರಿರಿಸಲು |ದಯ ಮಾಡಿಸೆ ಈ ಕ್ಷಣ ವೊಲ್ಲೆನ್ನದೆ |ಕಾಯಜ ಪಿತ ಪ್ರಸಂವೆಕಟರಾಯನ |ಜಾಯ ಜಗದಭಿಮಾನಿಯೆ…

error: Content is protected !!