-
Sarasi sambhava sundara
Composer : Shri Yogeendra tirtharu on Shri Rayaru SrI Yogeendra TIrtharu1671 – 1688aMkita : SrI hari prasAdAMkita ” SrIrAma “Aradhane – Magha Shuddha Dashami ಸರಸೀ ಸಂಭವಾ ಸುಂದರಾ |ಚರಣ ಯುಗ ಶರಣೆಂಬೆ ನಿನಗೆ |ಪ| ಕರುಣಿಸಿ ಪದವಾ ಪರಿಪಾಲಿಸಿದೆ |ಪರಮ ಪುರುಷನನುಗ್ರಹವ ಪಡೆದೆ | ೧ | ವೈರಿ ನಿಕರವಾ ದೂರೀಕರಿಸಿದೆ |ಗುರು ರಾಘವೇಂದ್ರರಾಯ ಸ್ಮರಿಸೂವೆ ನಿಮ್ಮಾಯ |೨| ಶ್ರೀರಾಮ ಪದಾಂಭೋಜ ವರ ಪೂಜಾ ಬಲದಿಂ |ದುರಿತಾವ್ಯನಗೆ…
-
Anandatirtharembo arthiya
Composer : Shri Gurupranesha vittala ಆನಂದ ತೀರ್ಥರೆಂಬೊ | ಅರ್ಥೀಯ ಪೆಸರುಳ್ಳ |ಗುರುಮಧ್ವ ಮುನಿರಾಯ |ಏನೆಂಬೆನೋ ನಿನ್ನ ಕರುಣೆಗೆ ಎಣೆಗಾಣೆಗುರುಮಧ್ವ ಮುನಿರಾಯ ||ಪ|| ಬೇಸರದೆ ಸರ್ವರೊಳು | ಶ್ವಾಸ ಜಪಗಳ ಮಾಡಿಗುರುಮಧ್ವ ಮುನಿರಾಯ ||ಶ್ರೀಶಗರ್ಪಿಸುತ ನಿನ್ನ | ದಾಸರನು ಸಲಹಿದೆಗುರುಮಧ್ವ ಮುನಿರಾಯ ||೧ || ಅಂದು ಹನುಮಂತನಾಗಿ ಬಂದು ಸುಗ್ರೀವಗೆಗುರುಮಧ್ವ ಮುನಿರಾಯ ||ಅಂದವಾದ ಪದವಿತ್ತಾ |ನಂದದಿಂದ ಸಲಹಿದೆಗುರುಮಧ್ವ ಮುನಿರಾಯ ||೨|| ಕುಂತಿಯ ಕುಮಾರನಾಗಿ | ಹಂತ ಕೌರವರ ಕೊಂದೆಗುರುಮಧ್ವ ಮುನಿರಾಯ ||ಅನಂತ ಪುಣ್ಯವ ಘಳಿಸಿ ಶ್ರೀಕಾಂತನಿಗರ್ಪಿಸಿದೆಗುರುಮಧ್ವ…
-
Ondu Baari smarane salade
Composer : Shri Vadirajaru ಒಂದು ಬಾರಿ ಸ್ಮರಣೆ ಸಾಲದೆ ಆ-ನಂದ ತೀರ್ಥರ ಪೂರ್ಣಪ್ರಜ್ಞರಸರ್ವಜ್ಞರಾಯರ ಮಧ್ವರಾಯರ ||ಪ|| ಪ್ರಕೃತಿ ಬಂಧದಲಿ ಸಿಲುಕಿಸಕಲ ವಿಷಯಗಳಲಿ ನೊಂದುಅಕಳಂಕ ಚರಿತ ಹರಿಯ ಪಾದಸೇರ ಬೇಕೆಂಬುವರಿಗೆ ||೧|| ಘೋರ ಸಂಸಾರಾಂಬುಧಿಗೆಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯ ಪಾದಸೇರ ಬೇಕು ಎಂಬುವರಿಗೆ ||೨|| ಹಿಂದನೇಕ ಜನ್ಮಗಳಲಿನೊಂದು ಯೋನಿಯಲ್ಲಿ ಬಂದುಇಂದಿರೇಶನ ಪಾದವನ್ನುಹೊಂದ ಬೇಕೆಂಬುವರಿಗೆ ||೩|| ಆರುಮಂದಿ ವೈರಿಗಳನುಸೇರದಂತೆ ಜರಿದುಧೀರನಾಗಿ ಹರಿಯ ಪಾದಸೇರ ಬೇಕೆಂಬುವರಿಗೆ ||೪|| ಹೀನ ಬುದ್ಧಿಯಿಂದ ಶ್ರೀಹಯವದನನ ಜರಿದುತಾನು ಬದುಕಲಾರದಿರಲುತೋರಿಕೊಟ್ಟ ಮಧ್ವಮುನಿಯ ||೫|| oMdu bAri…
