-
Satata Kalyana Achyuta
Composer : Shri Prasannavenkata dasaru ರಾಗ: ಸಿಂಧುಭೈರವಿ ಖಂಡಛಾಪುತಾಳ ಸತತ ಕಲ್ಯಾಣ ಅಚ್ಯುತ ಭಟರಿಗೆ || ಪ ||ರತಿಪತಿ ಪಿತನಂಘ್ರಿ ರತ ಮಹಾತ್ಮರಿಗೆ || ಅ ಪ || ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲ |ಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲ ||ಖೇದ ಮನಕಿಲ್ಲ ಖಿನ್ನತೆಯು ಮುಖಕಿಲ್ಲ |ಶ್ರೀಧವನ ನವ ಭಕುತಿಶೀಲ ಜೀವರಿಗೆ || ೧ || ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕು |ಉರಗ ಪೂಮಾಲೆಯಕ್ಕು ಉರಿ ತಣ್ಣಗಕ್ಕು ||ಶರಧಿ ಗೋಷ್ಪದವಕ್ಕು ಶರಘಾತ ಬೆಂಡಕ್ಕು |ನರಹರಿಯ ನಾಮವನು ನಂಬಿ…
-
Sri Hari Mahime Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಶ್ರೀಹರಿ ಮಹಿಮೆ ಸುಳಾದಿ( ಈ ಸುಳಾದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯು ಪ್ರಪಂಚಕ್ಕೆ ನಿಯಾಮಕನಾಗಿ ಜೀವರ ತಾರತಮ್ಯವನ್ನು ಅನುಸರಿಸಿ ಅವರಿಗೆ ಗತಿಯನ್ನು ಕೊಡುತ್ತಾನೆಂದೂ , ಬ್ರಹ್ಮಾಂಡವನ್ನು ನಿರ್ಮಿಸುವ ಮತ್ತು ಅದನ್ನು ಲಯ ಮಾಡುವ ಭಗವಂತನ ಅಚಿಂತ್ಯ ಮಹಿಮೆಯನ್ನು ದಾಸಾರ್ಯರು ಸಾರಿ ಹೇಳಿದ್ದಾರೆ. )ರಾಗ: ಮುಖಾರಿಧ್ರುವತಾಳಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವಮಗನ ಪಡೆದಿರುವೆ ನಾಭಿಕಮಲದಿದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆಖಗಗಮನಗಣಿತಗುಣನಿಲಯ ದೇವಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯಮಗನುಳ್ಳ ಸಿರಿಯು ಸಂಗಡಲೆ ಮುಕುಂದ –ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳುಮಗುವೆನಿಸಿ ಗೋಕುಲದೆಶೋದೆನಂದನರ…
-
Krishna Mahima Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ( ಮುದ್ದು ಮೂರುತಿ ಬಾಲ ಗೋಪಾಲ ಶ್ರೀಕೃಷ್ಣನ ರೂಪ , ವೃಂದಾವನದಲ್ಲಿ ಅವನ ಕುಣಿತ ,ಅವನ ಸರ್ವೋತ್ತಮತ್ವವನ್ನು ತಿಳಿಸಿದ್ದಾರೆ. ಭಗವಂತನ ಸರ್ವಪ್ರೇರಕತ್ವ , ನಿಯಾಮಕತ್ವವನ್ನು ಸ್ತುತಿಸುತ್ತಾ , ಪರಮಾತ್ಮನ ನಾಮಸ್ಮರಣೆಯೊಂದಿಗೆ ಭಕ್ತರು ತಮ್ಮ ಇಂದ್ರಿಯಗಳನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂದು ದಾಸರು ತಿಳಿಸಿಕೊಟ್ಟಿದ್ದಾರೆ. ) ರಾಗ: ಆರಭಿ ಧ್ರುವತಾಳ ಬಾಲಸೂರ್ಯನಿಭಮಣ್ಯಾಂಕ ಮೌಳಿಹೀಲಿಯ ಪಿಂಛ ಪ್ರವಾಳ ಗುಚ್ಛಮಾಲ್ಯಾಲರದಂಡೆ ಝೇಂಕರಿಪಾಳಿಬಾಲರಯ್ಯನ ಮೊಗದ ಶೋಭೆಭ್ರೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ –ಶಾಲೇರಿ ಸಿರಿವತ್ಸ ಕೌಸ್ತುಭನೀಲಮಾಣಿಕ…
