Composer : Shri Purandara dasaru
ಹರಿನಾಮ ಜಿಹ್ವಯೊಳಿರ ಬೇಕು, ನರನಾದ ಮೇಲೆ [ಪ]
ಭೂತ ದಯಾಪರನಾಗಿರಾ ಬೇಕು
ಪಾತಕವೆಲ್ಲವ ಕಳೆಯಲಿ ಬೇಕು
ಮಾತು ಮಾತಿಗೆ ಹರಿ ಎನ ಬೇಕು
ನರನಾದ ಮೇಲೆ [೧]
ಶಾಂತಿ ಸಮದಮ ಹಿಡಿಯಲು ಬೇಕು
ಭ್ರಾಂತಿ ಅವಗುಣವ ಕಳೆಯಲು ಬೇಕು
ಸಂತತ ಸನ್ಮಾರ್ಗದಲಿರಾ ಬೇಕು
ನರನಾದ ಮೇಲೆ [೨]
ಕಾಮ ಕ್ರೋಧವತಾ ಬಿಡ ಬೇಕು
ಮಮತೆ ಅಹಂಕಾರವ ನೀಗಲು ಬೇಕು
ಸೌಮ್ಯರ ಸಂಗದೊಳಿರಾ ಬೇಕು
ನರನಾದ ಮೇಲೆ [೩]
ವೇದ ಶಾಸ್ತ್ರವನು ಓದಲು ಬೇಕು
ಬೋಧ ತತ್ವ ತಿಳಿಯಲು ಬೇಕು
ಮಾಧವನ ಸ್ಮರಣೆ ಮಾಡಲು ಬೇಕು
ನರನಾದ ಮೇಲೆ [೪]
ತಂದೆ ಕೃಷ್ಣನ ದಯ ಪಡೆಯ ಬೇಕು
ಬಂದದ್ದುಂಡು ಸುಖಪಡ ಬೇಕು
ಚೆಂದಾಗಿ ಜಗದೊಳಗಿರ ಬೇಕು
ನರನಾದ ಮೇಲೆ [೫]
harinAma jihvayoLira bEku, naranAda mEle [pa]
BUta dayAparanAgirA bEku
pAtakavellava kaLeyali bEku
mAtu mAtige hari ena bEku
naranAda mEle [1]
SAMti samadama hiDiyalu bEku
BrAMti avaguNava kaLeyalu bEku
saMtata sanmArgadalirA bEku
naranAda mEle [2]
kAma krOdhavatA biDa bEku
mamate ahaMkArava nIgalu bEku
saumyara saMgadoLirA bEku
naranAda mEle [3]
vEda SAstravanu Odalu bEku
bOdha tatva tiLiyalu bEku
mAdhavana smaraNe mADalu bEku
naranAda mEle [4]
taMde kRuShNana daya paDeya bEku
baMdadduMDu suKapaDa bEku
ceMdAgi jagadoLagira bEku
naranAda mEle [5]

Leave a Reply
You must be logged in to post a comment.