Composer : Shri Indiresa ankita
ಬಾರೋ ಬೇಗನೆ ಬಾದರಾಯಣ ನಿನ್ನ
ಸಾರುವೆ ಸಂತತ | ಪ |
ಗ್ರಂಥಗಳನು ತೋರಿಸು ತವ ಸುಸ್ಮಿತ ವದನ
ದೇಹಗಾರದೊಳಗೆ ತಪ್ಪಿಸಭಿಮಾನ | ಅ.ಪ |
ಬಾದರಿ ಸುಖ ವಲಜೆ ಮುನಿತವ ಪೂರ್ಣ-
ಬೋಧ ವೈಶಂಪಾಯನ ಮುನಿ
ಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-
ಗಾಧ ಮಹಿಮೆ ತೋರಿಸೋ | ೧ |
ವೃಂದ ಚಕೂತ ಮುನಿಗಳಿಗೆ ಸುಖ
ಸಂದೋಹದಾರ್ಥ ಪೇಳುತಿರಳು
ಬಂದ ಸಂಶಯ ಹರಿಸುತ ಬೇಗ ಮಹಾ-
ನಂದ ನೀಡಿದಿ ಕೇಳಿದವರಿಗೆ | ೨ |
ಸತ್ಯವತಿಯ ಸುಕುಮಾರನೆ
ಧಾತ್ರಿಯೊಳಗೆ ಪುಣ್ಯಚರಿತನೆ
ಸುತ್ತಮುತ್ತಲೂ ಶೇಷಶಯ್ಯನೆ ಎನ್ನ
ನೇತ್ರಕ್ಕೆ ಪೊಳಿ ಇಂದಿರೇಶನೆ | ೩ |
bArO bEgane bAdarAyaNa ninna
sAruve saMtata | pa |
graMthagaLanu tOrisu tava susmita vadana
dEhagAradoLage tappisaBimAna | a.pa |
bAdari suKa valaje munitava pUrNa-
bOdha vaiSaMpAyana muni
sAdhu saMsEvita padAMBOjinI yemaga-
gAdha mahime tOrisO | 1 |
vRuMda cakUta munigaLige suKa
saMdOhadArtha pELutiraLu
baMda saMSaya harisuta bEga mahA-
naMda nIDidi kELidavarige | 2 |
satyavatiya sukumArane
dhAtriyoLage puNyacaritane
suttamuttalU SEShaSayyane enna
nEtrakke poLi iMdirESane | 3 |
Leave a Reply
You must be logged in to post a comment.