Chittaisida Vyasaraya

Composer: Shri Purandara dasaru

Smt.Nandini Sripad

ರಾಗ: ಸೌರಾಷ್ಟ್ರ ಆದಿತಾಳ

ಚಿತ್ತೈಸಿದ ವ್ಯಾಸರಾಯ । ಚಿತ್ತಜನಯ್ಯನ ಸಭೆಗೆ ॥ ಪ ॥
ನಿತ್ಯ ಮುತ್ತೈದೆಯರೆಲ್ಲ । ಎತ್ತೆ ರತುನದಾರತಿಯ ॥ ಅ.ಪ ॥

ಹೇಮಮಯವಾದ ದಿವ್ಯ । ವ್ಯೋಮಯಾನವನ್ನೆ ಏರಿ ।
ಸ್ವಾಮಿ ವ್ಯಾಸರಾಯ ಪೊರಟ । ಪ್ರೇಮದಿ ಹರಿಪುರಕೆ ॥ 1 ॥

ಹಾಟಕದ ಬೆತ್ತಕೋಟಿ । ಸಾಟಿ ಇಲ್ಲದೆ ಪಿಡಿದು ।
ನೀಟಾದ ಓಲಗದವರ । ಕೂಟಗಳ ಮಧ್ಯದಲ್ಲಿ ॥ 2 ॥

ಸಾಧು ವಿಪ್ರಜನರೆಲ್ಲ । ವೇದ ಘೋಷಣೆಯ ಮಾಡೆ ।
ನಾದವುಳ್ಳ ನಗಾರಿಯು । ಭೇದಿಸಿತು ನಾಲ್ಕು ದಿಕ್ಕು ॥ 3 ॥

ಹೇಮಮಯ ಪಿಡಿಯುಳ್ಳ । ಚಾಮರಂಗಳನ್ನೆ ಪಿಡಿದು ।
ಕಾಮಿನಿಮಣಿಯರ್ ಕೆಲದಿ । ಸ್ವಾಮಿಯೆಂದು ಬೀಸುತ್ತಿರೆ ॥ 4 ॥

ಅರವಿಂದಾಸನನಯ್ಯ । ಪುರಂದರವಿಟ್ಠಲನು ।
ಸಿರಿ ಸಹಿತದಿ ಬಂದು । ಕರ ಪಿಡಿದೆತ್ತಿದ್ದು ಕಂಡೆ ॥ 5 ॥


rAga: saurAShTra AditALa
cittaisida vyAsarAya | cittajanayyana saBege || pa ||
nitya muttaideyarella | ette ratunadAratiya || a.pa ||

hEmamayavAda divya | vyOmayAnavanne Eri |
svAmi vyAsarAya poraTa | prEmadi haripurake || 1 ||

hATakada bettakOTi | sATi illade piDidu |
nITAda Olagadavara | kUTagaLa madhyadalli || 2 ||

sAdhu viprajanarella | vEda GOShaNeya mADe |
nAdavuLLa nagAriyu | BEdisitu nAlku dikku || 3 ||

hEmamaya piDiyuLLa | cAmaraMgaLanne piDidu |
kAminimaNiyar keladi | svAmiyeMdu bIsuttire || 4 ||

araviMdAsananayya | puraMdaraviTThalanu |
siri sahitadi baMdu | kara piDidettiddu kaMDe || 5 ||

Leave a Reply

Your email address will not be published. Required fields are marked *

You might also like

error: Content is protected !!