Tarale Ranne – Rugmini Parvati samvada

Composer: Shri Purandara dasaru

Expln by Shri Kesava Rao Tadipatri

ತರಳೆ ರನ್ನೆ ಕಪ್ಪು ಮೈಯವ ಏತರ ಚೆಲುವನೆ
ಕರಿಯ ಜಡೆಯ ಜೋಗಿಗಿಂತ ಉತ್ತಮನಲ್ಲವೆ
೧: ಜಲಧಿಯೊಳು ವಾಸವೇನು ಮನೆಗಳಿಲ್ಲವೆ
ಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೆ
೨: ಮಂದರ ಗಿರಿ ಯನ್ನು ಪೊತ್ತುದು ಏನು ಚಂದವೆ
ಕಂದನೊಯಿದು ಅಡವಿಯೊಳಿಡುವುದಾವ ನ್ಯಾಯವೆ
೩: ಮಣ್ಣ ನಗೆದು ಬೇರ ಮೆಲುವುದೇನು ಸ್ವಾದುವೆ
ತನ್ನ ಕರದಿ ಕಪಾಲ ಪಿಡಿವುದ್ಯಾವ ನ್ಯಾಯವೆ
೪: ಮುತ್ತಿನ ಹಾರವಿರಲು ಕರುಳ ಮಾಲೆ ಚಂದವೆ
ನಿತ್ಯ ರುಣ್ಡ ಮಾಲೆ ಧರಿಸೋದದು ನ್ಯಾಯವೆ
೫: ಗಿಡ್ಡನಾಗಿ ಬೆಳೆದು ಅಳೆವುದೇನು ನ್ಯಾಯವೆ
ಗುಡ್ಡದ ಮಗಳ ತಂದೆಗೆ ಮುನಿವುದೆನು ನ್ಯಾಯವೆ
೬: ಪಿತನ ಮಾತ ಕೇಳಿ ಮಾತೆಯ ಶಿರವನಳಿವರೆ
ಸಿತಿಕಣ್ಠನಾಗಿ ಇರುವುದದಾವ ನ್ಯಾಯವೆ
೭: ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೆ
ಕೂಡಿ ಬಂದ ಭೂತ ಬಳಗ ಜ್ಞಾತಿ ಸಮ್ಬಂಧವೆ
೮: ಹಾವಿನ ಹೆಡೆಯ ತುಳಿವರೇನೆ ಅಂಜಿಕಿಲ್ಲವೆ
ಹಾವು ಮೈಗೆ ಸುತ್ತಿರಲು ಹೇಗೆ ಜೀವಿಪನೆ
೯: ಬತ್ತಲಿರುವರೇನು ಅವಗೆ ನಾಚಿಕಿಲ್ಲವೆ
ಸತ್ತ ಗಜದ ಚರ್ಮ ಹೊದೆಯಲು ಹೇಸಿಗಿಲ್ಲವೆ
೧೦: ಉತ್ತಮ ತೇಜಿಯಿರಲು ಧರೆಯೊಳು ಹದ್ದನೇರ್ವರೆ
ಎತ್ತಿನ ಬೆನ್ನ ನೇರಿದವರು ಬುದ್ಧಿವಂತರೆ
೧೧: ಹರಿ ಹರರಿಗೆ ಸಾಮ್ಯವೇನೆ ಪೇಳೆ ರುಗ್ಮಿಣಿ
ಪುರಂದರ ವಿಟ್ಟಲ ಸರ್ವೋತ್ತಮ ಕೇಳೆ ಭವಾನಿ


taraLe ranne kappu maiyava Etara celuvane
kariya jaDeya jOgigiMta uttamanallave
1: jaladhiyoLu vAsavEnu manegaLillave
lalane kELu kADigiMta lEsu allave
2: maMdara giri yannu pottudu Enu caMdave
kaMdanoyidu aDaviyoLiDuvudAva nyAyave
3: maNNa nagedu bEra meluvudEnu svAduve
tanna karadi kapAla piDivudyAva nyAyave
4: muttina hAraviralu karuLa mAle caMdave
nitya ruNDa mAle dharisOdadu nyAyave
5: giDDanAgi beLedu aLevudEnu nyAyave
guDDada magaLa taMdege munivudenu nyAyave
6: pitana mAta kELi mAteya SiravanaLivare
sitikaNThanAgi iruvudadAva nyAyave
7: kODaga karaDi kapigaLa hiMDu baMdhu baLagave
kUDi baMda BUta baLaga j~jAti sambaMdhave
8: hAvina heDeya tuLivarEne aMjikillave
hAvu maige suttiralu hEge jIvipane
9: battaliruvarEnu avage nAcikillave
satta gajada carma hodeyalu hEsigillave
10: uttama tEjiyiralu dhareyoLu haddanErvare
ettina benna nEridavaru buddhivaMtare
11: hari hararige sAmyavEne pELe rugmiNi
puraMdara viTTala sarvOttama kELe BavAni

Leave a Reply

Your email address will not be published. Required fields are marked *

You might also like

error: Content is protected !!