Composer: Shri Purandara dasaru
ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದೆ ಲೇಸು ||ಪ||
ಮರಳಿ ಮರಳಿ ತಾ ಪಡೆಯದ ಭಾಗ್ಯವ
ಮರುಗಿದರೆ ತನಗಾದೀತೆ ||ಅ.ಪ||
ದೂರು ಬರುವ ತೆರ ನಂಬಿಗೆ ಕೊಟ್ಟರೆ
ದುರ್ಜನ ಬರುವುದು ತಪ್ಪೀತೆ,
ದೂರದಿ ನಿಂತು ಮೊರೆಯಿಟ್ಟು ಕೂಗಲು
ಚೋರನಿಗೆ ದಯ ಪುಟ್ಟೀತೆ,
ಜಾರಿ ನಾರಿ ತಾ ಪಾತಿವ್ರತೆ ಎನ್ನಲು
ಜಾರನಿಗೆ ನಿಜ ತೋರಿತೆ,
ಊರು ಬಿಟ್ಟು ಬೇರೂರಿಗೆ ಹೋದರು
ಪ್ರಾರಬ್ಧವು ಬೇರಾದೀತೆ [೧]
ಪಾಟ ಪಡುವುದು ಹಣೆಯಲ್ಲಿರಲು
ಪಟ್ಟಮಂಚ ತನಗಾದೀತೆ,
ಹೊಟ್ಟೆಯಲಿ ಸುತರಿಲ್ಲೆಂದು ಹೊರಳಲು
ಹುಟ್ಟು ಬಂಜೆಗೆ ಮಕ್ಕಳಾದೀತೆ,
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ
ಬೇಟೆಗಾರನಿಗೆ ದಯ ಪುಟ್ಟೀತೆ,
ಕೆಟ್ಟ ಹಾವು ತಾ ಕಚ್ಚಿದ ವಿಷವನು
ಬಟ್ಟೆಯಲಿ ಒರೆಸಲು ಹೋದೀತೆ [೨]
ಧನಿಕರ ಕಂಡು ದೈನ್ಯವ ಪಟ್ಟರೆ
ದಾರಿದ್ರಿಯವು ತಾ ಹಿಂಗೀತೆ
ದಿನದಿನ ನೊಸಲೊಳು ನಾಮವಣಿಟ್ಟರೆ
ದೇವರ ದಯವು ಪುಟ್ಟೀತೆ
ನೆನಿಸಿಕೊಂಡು ಏಳೆ ಹಂಜಿಯ ನೂತರೆ
ಮನಿಯ ಸಾಲವು ತೀರೀತೆ
ಅನುದಿನದಲಿ ಶ್ರೀ ಪುರಂದರ ವಿಠಲನ
ನೆನೆಯದಿದ್ದರೆ ಭವ ಹಿಂಗೀತೆ [೩]
hari ninnolumeyu Aguva tanaka
aritu summaniruvude lEsu ||pa||
maraLi maraLi tA paDeyada BAgyava
marugidare tanagAdIte ||a.pa||
dUru baruva tera naMbige koTTare
durjana baruvudu tappIte,
dUradi niMtu moreyiTTu kUgalu
cOranige daya puTTIte,
jAri nAri tA pAtivrate ennalu
jAranige nija tOrite,
Uru biTTu bErUrige hOdaru
prArabdhavu bErAdIte [1]
pATa paDuvudu haNeyalliralu
paTTamaMca tanagAdIte,
hoTTeyali sutarilleMdu horaLalu
huTTu baMjege makkaLAdIte,
beTTada navilige kaNNIru baMdare
bETegAranige daya puTTIte,
keTTa hAvu tA kaccida viShavanu
baTTeyali oresalu hOdIte [2]
dhanikara kaMDu dainyava paTTare
dAridriyavu tA hiMgIte
dinadina nosaloLu nAmavaNiTTare
dEvara dayavu puTTIte
nenisikoMDu ELe haMjiya nUtare
maniya sAlavu tIrIte
anudinadali shrI puraMdara viThalana
neneyadiddare Bava hiMgIte [3]
Leave a Reply