Enu valle Hariye

Composer : Shri Kanakadasaru

ಏನು ವಲ್ಲೆ ಹರಿಯೇ ನಿನ್ನ ತುತಿಸಿ ಕೇಳುವದು || ಪ ||
ಜ್ಞಾನ ಭಕ್ತಿ ಕೊಡು ಎಮಗ್- ಇದೊಂದೇ ದೊಡ್ಡದು || ಅ.ಪ ||

ಒಂದು ನೆವದಿಂದ ಎನ್ನ ಕಾಡಿದವರಿಗೆ
ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ
ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ
ಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ ||

ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ
ಮುಂದೆ ನನ್ನ ಬೈಯ್ಯುವರೆಲ್ಲಾ ಅಂದಣವೇರಲಿ
ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ || ೨ ||

ಜನರೊಳಗೆ ಮಾನಭಂಗ ಮಾಡಿದವರಿಗೆ
ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ
ಹಾನಿ ಬಾರದಂಥ ಲೋಕ ಆಗಲಿ ಅವರಿಗೆ
ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ || ೩ ||


Enu valle hariyE ninna tutisi kELuvadu || pa ||
j~jAna Bakti koDu emag- idoMdE doDDadu || a.pa ||

oMdu nevadiMda enna kADidavarige
honnu heNNu gaMDu makkaLu Agali avarige
kaMdi kuMdi enna bAdhe paDisidavarige
kanyA dAnada Pala baMdu taTTali avarige || 1 ||

hiMde nanna baidavarellA ceMdAgirali
muMde nanna baiyyuvarellA aMdaNavErali
kuMdu iTTavarella kudureya kaTTi bALali
baMdu oddavarige Battada gadde beLeyali || 2 ||

janaroLage mAnaBaMga mADidavarige
jEnu tuppa sakkare UTa Agali avarige
hAni bAradaMtha lOka Agali avarige
mahAnuBAva muktiya koDuva neleyAdikESava || 3 ||

Leave a Reply

Your email address will not be published. Required fields are marked *

You might also like

error: Content is protected !!