Composer : Shri Gurujagannatha dasaru on Shri Vadirajaru
ಸೋದಾಪುರದಲಿ ನಿಂತು ರಾಜಿಪನ್ಯಾರೇ ಪೇಳಮ್ಮಯ್ಯಾ ||ಪ||
ಭೂರ ಹಯಮುಖ ಪಾದ ಭಜಿಸುವ
ವಾದಿಗಜಕೆ ಮೃಗರಾಜ ಕಾಣಮ್ಮಯ್ಯ ||ಅ.ಪ||
ಅಂಚೆವಾಹನ ಪ್ರಪಂಚದಿ ಪೊಳೆವ ವಿ –
ರಿಂಚಿಗೆ ಸಮನೇನೆ ಪೇಳಮ್ಮಯ್ಯಾ
ಸಂಚಿತ ಕರ್ಮವ ಕೊಂಚಿಸಿ ಭಕ್ತರ
ಚಂಚಲ ಬಿಡಿಸುವನ್ಯಾರೇ ಪೇಳಮ್ಮಯ್ಯಾ
ಮಿಂಚುರಾಶಿಗೆ ಸಮ ಪಂಚವೃಂದಾವನ
ಲಾಂಚಿತನ್ಯಾರೆ ಪೇಳಮ್ಮಯ್ಯಾ
ಚಂಚಲಾಕ್ಷಿ ತಿಳಿ ಪಂಚರೂಪಾತ್ಮಕ
ಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮಾಯ್ಯ [೧]
ಸುಂದರ ಶುಭತಮ ವೃಂದಾವನ ನಿಜ
ಮಂದಿರ ಸ್ಥಿತನ್ಯಾರೇ ಪೇಳಮ್ಮಯ್ಯಾ
ವಂದಿಪ ಜನರಘ ವೃಂದ ಕಳೆದು
ಆನಂದ ನೀಡುವನ್ಯಾರೇ ಪೇಳಮ್ಮಯ್ಯಾ
ಇಂದು ಮುಖಿಯೆ ಈತ ಗಂಧವಾಹನನಾಗಿ
ಮಂದಜಾಸನ ಪದ ಪೊಂದಿಹನಮ್ಮಾ [೨]
ಖ್ಯಾತ ಮಹಿಮ ಮಾಯಿ ವ್ರಾತಗಳ ವಿ –
ಘಾತವ ಮಾಡಿಹನ್ಯಾರೇ ಪೇಳಮ್ಮಯ್ಯಾ
ಆತುರ ಜನರಿಗೆ ಮಾತ ಪಿತರಂತೆ
ಮಾತು ಲಾಲಿಪನ್ಯಾರೇ ಪೇಳಮ್ಮಯ್ಯಾ
ದಾತ ಗುರುಜಗನ್ನಾಥವಿಠಲನತಿ
ಪ್ರೀತಿಯ ಪಡೆದಿಹನ್ಯಾರೇ ಪೇಳಮ್ಮಯ್ಯಾ
ವೀತಭಯ ಪುರುಹೂತ ಪ್ರಮುಖ
ಭೂತನಾಥನುತ ಮಾತರಿಶ್ವನಿತನಮ್ಮಾ [೩]
sOdApuradali niMtu rAjipanyArE pELammayyA ||pa||
BUra hayamuKa pAda Bajisuva
vAdigajake mRugarAja kANammayya ||a.pa||
aMcevAhana prapaMcadi poLeva vi –
riMcige samanEne pELammayyA
saMcita karmava koMcisi Baktara
caMcala biDisuvanyArE pELammayyA
miMcurASige sama paMcavRuMdAvana
lAMcitanyAre pELammayyA
caMcalAkShi tiLi paMcarUpAtmaka
muMcige prANa viriMci kANammAyya [1]
suMdara shubhatama vRuMdAvana nija
maMdira sthitanyArE pELammayyA
vaMdipa janaraGa vRuMda kaLedu
AnaMda nIDuvanyArE pELammayyA
iMdu muKiye Ita gaMdhavAhananAgi
maMdajAsana pada poMdihanammA [2]
KyAta mahima mAyi vrAtagaLa vi –
GAtava mADihanyArE pELammayyA
Atura janarige mAta pitaraMte
mAtu lAlipanyArE pELammayyA
dAta gurujagannAthaviThalanati
prItiya paDedihanyArE pELammayyA
vItaBaya puruhUta pramuKa
BUtanAthanuta mAtariSvanitanammA [3]

Leave a Reply
You must be logged in to post a comment.