Rishi panchami story/kathe

Source: Shri Srinivas Mathada’s book

ಶ್ರೀ ಭವಿಷ್ಯೋತ್ತರ ಪುರಾಣೇ ಋಷಿಪಂಚಮೀ ಕಥಾ

ಯುಧಿಷ್ಠರ ಉವಾಚ-

ಶ್ರುತಾನಿ ದೇವ ದೇವೇಶ ವ್ರತಾನಿ ಸುಬಹೂನಿ ಚ |
ಸಾಂಪ್ರತಂ ತು ಅನ್ಯದಾಚಕ್ಷ್ವ ವ್ರತಂ ಪಾಪ ಪ್ರಣಾಶನಂ ||

ಶ್ರೀಕೃಷ್ಣ ಉವಾಚ-

ಅಥಾನ್ಯದಪಿ ರಾಜೇಂದ್ರ ಪಂಚಮೀ ಋಷಿ ಸಂಜ್ಞೆಕಾಂ |
ಪ್ರವಕ್ಷ್ಯಾಮಿ ಚ ಯಾಂ ಕೃತ್ವಾ ನಾರೀ ಪಾಪಾತ್ ಪ್ರಮುಚ್ಯತೇ ||

ಧರ್ಮರಾಜನು ಶ್ರೀಕೃಷ್ಣನನ್ನು ಕುರಿತು ಹೇಳುತ್ತಾನೆ- ಶ್ರೀಕೃಷ್ಣನೇ !
ನಿನ್ನಿಂದ ಅನೇಕ ವ್ರತಗಳನ್ನು ಕೇಳಿದೆನು. ಈಗ ಎಲ್ಲಾ ಪಾಪಗಳನ್ನು ನಾಶ ಮಾಡುವಂಥಾ ಇನ್ನೊಂದು ವ್ರತವನ್ನು ಹೇಳು.

ಶ್ರೀಕೃಷ್ಣನು ಹೇಳುವನು- ಧರ್ಮರಾಜ ! ಹೆಣ್ಣು ಮಕ್ಕಳು ಯಾವ ವ್ರತವನ್ನು ಮಾಡುವುದರಿಂದ ಪಾಪದಿಂದ ಮುಕ್ತರಾಗುವರೋ ಅಂತಹ
“ಋಷಿಪಂಚಮೀ” ಎಂಬ ವ್ರತವಿದೆ ಅದನ್ನು ಹೇಳುವೆನು.

ಸ್ತ್ರೀಯರು ರಜಸ್ವಲೆಯರಾದಾಗ ತನಗೆ ತಿಳಿದೋ, ತಿಳಿಯದೆಯೋ ತನ್ನ ಮನೆ ಕೆಲಸದ ಕಾರಣಕ್ಕಾಗಿ ಪಾತ್ರೆ ಮುಂತಾದವುಗಳನ್ನು ಮುಟ್ಟುವಳೋ, ಆ ಮಹಾಪಾಪದಿಂದ ನರಕಕ್ಕೆ ಹೋಗುವಳು.
ಅದಕ್ಕಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ನಾಲ್ಕೂ ವರ್ಣದ ಜನರು ಅವಳನ್ನು ಮೂರುದಿನ ದೂರವಿಡಬೇಕು. ಅದಕ್ಕೆ ಕಾರಣ ಹೀಗಿದೆ.

ಹಿಂದೆ ಇಂದ್ರನು ಒಬ್ಬ ಬ್ರಾಹ್ಮಣನ ಮಗನಾದ ವೃತ್ರಾಸುರನನ್ನು ಸಂಹಾರ ಮಾಡಿದ್ದರಿಂದ ಇಂದ್ರನಿಗೆ ಬ್ರಹ್ಮ ಹತ್ಯೆ ದೋಷ ಬಂದಿತು.
ಇದರಿಂದ ಕಾಂತಿಹೀನನಾದ ಇಂದ್ರನು ಮಹತ್ತರವಾದ ಪಾಪದಿಂದ ಬಿಡುಗಡೆ ಹೊಂದಲು ಬ್ರಹ್ಮದೇವರಿಗೆ ಮೊರೆಯಿಟ್ಟನು. ಬ್ರಹ್ಮದೇವರು ಇಂದ್ರನ ಸ್ಥಿತಿಯನ್ನು ನೋಡಿ ಕ್ಷಣ ಕಾಲ ಯೋಚಿಸಿ ನಂತರ ಸಂತೋಷದಿಂದ ಇಂದ್ರನು ಪಾಪದಿಂದ ಬಿಡುಗಡೆಯಾಗುವಂತೆ ಮಾಡಿದನು.

ಬ್ರಹ್ಮಹತ್ಯೆಯನ್ನು ನಾಲ್ಕು ವಿಭಾಗ ಮಾಡಿ ನಾಲ್ಕು ಸ್ಥಾನಗಳಲ್ಲಿಟ್ಟನು. ಮೊದಲ ಭಾಗವನ್ನು ಬೆಂಕಿಯ ಮೊದಲಿನ ಜ್ವಾಲೆಯಲ್ಲಿ, ಎರಡನೆಯ ಭಾಗವನ್ನು ಮೊದಲು ಬಂದ ನೀರಿನಲ್ಲಿ, ಮೂರನೆಯ ಭಾಗವನ್ನು ಪರ್ವತದ ಶಿಖರ ಹಾಗೂ ಮರಗಿಡಗಳಲ್ಲಿ, ಕೊನೆಯ ಭಾಗವನ್ನು ಹೆಣ್ಣು ಮಕ್ಕಳ ರಜಸ್ಸಿನಲ್ಲಿ ಇಟ್ಟನು. ಆದ್ದರಿಂದ ರಜಸ್ವಲೆಯರಾದ ಹೆಣ್ಣು ಮಕ್ಕಳನ್ನು ಪ್ರಯತ್ನ ಪೂರ್ವಕವಾಗಿ ಬ್ರಹ್ಮದೇವರ ಆಜ್ಞೆಯಂತೆ ನಾಲ್ಕು ವರ್ಣದವರೂ ದೂರ ಇಡಬೇಕು.

ಮುಟ್ಟಾದ ಸ್ತ್ರೀಯು ಮೊದಲದಿನ ಹೊಲೆಯರಂತೆ, ಎರಡನೆಯದಿನ ಬ್ರಹ್ಮಘಾತಿನಿಯಂತೆ, ಮೂರನೆಯದಿನ ರಜಕ (ಅಗಸರ)ರಂತೆ ಅಪವಿತ್ರಳಿದ್ದು ನಾಲ್ಕನೆಯದಿನ ಗಂಡನ ಸೇವೆಗೆ ಮಾತ್ರ ಶುದ್ಧಳು ಹೊರತು, ದೇವಕಾರ್ಯ, ಪಿತೃಕಾರ್ಯಗಳಿಗೆ ಐದನೆಯದಿನವೇ ಶುದ್ಧಳಾಗುವಳು. ಆದ್ದರಿಂದ ಮುಟ್ಟಾದ ದಿನಗಳಲ್ಲಿ ತಿಳಿದೋ, ತಿಳಿಯದೆಯೋ ಮುಟ್ಟಿ ಮನೆಗೆಲಸ ಮಾಡಿದ ಪಾಪವನ್ನು ಹೋಗಲಾಡಿಸಿಕೊಳ್ಳಲು ಈ “ಋಷಿಪಂಚಮೀ” ವ್ರತವನ್ನು ಮಾಡಬೇಕು. ಈ ವ್ರತವು ಎಲ್ಲ ಪಾಪಗಳನ್ನು ನಾಶಪಡಿಸುತ್ತದೆ. ಕಾರಣ ನಾಲ್ಕೂ ವರ್ಣದ ಸ್ತ್ರೀಯರು ಅವಶ್ಯವಾಗಿ ಮುಟ್ಟು ನಿಂತ ಮೇಲೆ ಮಾಡಬೇಕು. ಈ ವಿಷಯವಾಗಿ ಶ್ರೀಕೃಷ್ಣನು ಪೂರ್ವಕಾಲದಲ್ಲಿ ನಡೆದ ಒಂದು ಕಥೆಯನ್ನು ಹೇಳುವನು-

ಹಿಂದೆ ವಿದರ್ಭದೇಶದಲ್ಲಿ ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಣುವ “ಸೇನಜಿತ್” ಎಂಬ ರಾಜನಿದ್ದನು. ಅವನ ರಾಜ್ಯದಲ್ಲಿ ವೇದ ವೇದಾಂಗಗಳನ್ನು ತಿಳಿದವನು. ಪ್ರಾಣಿದಯೆಯುಳ್ಳ ’ಸುಮಿತ್ರ’ನೆಂಬ ಬ್ರಾಹ್ಮಣನು ಒಕ್ಕಲುತನದಿಂದ ತನ್ನ ಜೀವನವನ್ನು ನಡೆಸುತ್ತಿದ್ದನು. ಅವನಿಗೆ ಸಾಧ್ಯ, ಶಿಖಾಮಣಿಯಾದ ಜಯಶ್ರೀ ಎಂಬ ಅನುರೂಪಳಾದ ಹೆಂಡತಿ ಇದ್ದಳು. ಇವರ ಮನೆಯಲ್ಲಿ ಕೆಲಸದವರು, ಸ್ನೇಹಿತರು, ನೆಂಟರು, ಇಷ್ಟರು ಎಲ್ಲರೂ ಕೂಡಿಯೇ ವಾಸಿಸುತ್ತಿದ್ದರು. ಎಲ್ಲರ ಹೊಟ್ಟೆ ತುಂಬುವದು ಹೇಗೆಂಬ ಚಿಂತೆಯಿಂದ ಮಳೆಗಾಲದಲ್ಲಿ ಮನೆಕೆಲಸ ಮುಗಿದ ಮೇಲೆ ಹೊಲಕ್ಕೆ ಹೋಗಿ ಅಲ್ಲಿ ಮನಸ್ಸುಗೊಟ್ಟು ಹೊಲದ ಕೆಲಸವನ್ನು ಜಯಶ್ರೀಯು ಮಾಡುತ್ತಿದ್ದಳು.

ಹೀಗಿರಲು ಒಮ್ಮೆ ಅವಳು ಮುಟ್ಟಾದಳು. ಈ ಕಾಲದಲ್ಲಿ ಮನೆಯ ಪಾತ್ರೆ ಪಡಗುಗಳನ್ನು ಮುಟ್ಟಿ ಕೆಲಸ ಮಾಡಿದಳು. ಮುಂದೆ ಕೆಲಕಾಲ ಕಳೆದ ಮೇಲೆ ಅವಳು ಮರಣ ಹೊಂದಿದಳು. ಆಕೆಯ ಗಂಡನೂ ಸ್ವಲ್ಪು ದಿನಗಳ ನಂತರ ಮರಣ ಹೊಂದಿದನು. ಹೀಗೆ ಅವರಿಬ್ಬರೂ ವಿಧಿವಶರಾದ ಮೇಲೆ ಮುಂದೆ ಜಯಶ್ರೀಯು ನಾಯಿಯ ಜನ್ಮವನ್ನು, ಸುಮಿತ್ರನು ಎತ್ತಿನ ಜನ್ಮವನ್ನು ಪಡೆದರು.

ಹಿಂದಿನ ಜನ್ಮದಲ್ಲಿ ಇವರು ಸ್ವಂತ ಧರ್ಮಾಚರಣೆಯನ್ನು ಮಾಡಿದ್ದರಿಂದ ಪೂರ್ವಜನ್ಮದ ಸ್ಮರಣೆಯಿದ್ದು ಇಬ್ಬರೂ ತಮ್ಮ ಮಗನ ಮನೆಯಲ್ಲೇ ತಮ್ಮ ಹಿಂದಿನ ಕರ್ಮಗಳನ್ನು ನೆನೆಯುತ್ತ ನಾಯಿ, ಎತ್ತಿನ ಜನ್ಮವನ್ನು ಹೊಂದಿ ವಾಸವಾಗಿದ್ದರು. ಮಗನಾದ ಸುಮತಿಯು ಗುರುಸೇವೆ. ಅತಿಥಿ, ದೇವತಾ ಸೇವೆಗಳನ್ನು ಭಕ್ತಿಯಿಂದ ಮಾಡುತ್ತಿದ್ದನು. ಹೀಗಿರಲು ಆತನ ತಂದೆಯ ಶ್ರಾದ್ದ ಬರಲು ಸುಮತಿಯು ತನ್ನ ಹೆಂಡತಿಯಾದ ಚಂದ್ರವತಿಗೆ ಹೀಗೆ ಹೇಳಿದನು. “ಈ ದಿನ ನನ್ನ ತಂದೆಯ ಶ್ರಾದ್ಧವಿದೆ. ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. ನೀನು ಅಡಿಗೆಯನ್ನು ಮಾಡೆಂದು ಹೇಳಲು”

ಆಕೆಯು ಗಂಡನ ಆಜ್ಞೆಯಂತೆ ಅಡಿಗೆ ಮಾಡುತ್ತ ಪಾಯಸದ ಪಾತ್ರೆಯನ್ನು ಒಲೆಯ ಮೇಲೆ ಇಟ್ಟಿರಲು ಅದರಲ್ಲಿ ಹಾವು ತನ್ನ ವಿಷವನ್ನು ಬಿಟ್ಟಿತು. ಇದನ್ನು ಆ ನಾಯಿಯು ನೋಡಿ “ಈ ಪಾಯಸವನ್ನು ಬ್ರಾಹ್ಮಣರುತಿನ್ನಲು ವಿಷವೇರಿ ಸಾಯುವರು ನನ್ನ ಮಗನಿಗೆ ಬ್ರಹ್ಮಹತ್ಯೆ ದೋಷ ಬರುತ್ತದೆ” ಎಂದು ವಿಚಾರಿಸಿ, ಮಹತ್ತರವಾದ ಬ್ರಹ್ಮಹತ್ಯಾ ದೋಷಕ್ಕೆ ಹೆದರಿ ತಾನು ಹೋಗಿ ಅಡಿಗೆಯನ್ನು ಮುಟ್ಟಿತು.

ಇದನ್ನು ಕಂಡ ಚಂದ್ರವತಿಯು ಕೋಪದಿಂದ ಆ ನಾಯಿಯನ್ನು ಉರಿಯುವ ಕಟ್ಟಿಗೆಯಿಂದ ಹೊಡೆದು, ಅಪವಿತ್ರವಾದ ಪಾತ್ರೆಗಳನ್ನು ತೊಳೆದು, ತಾನು ಸ್ನಾನಮಾಡಿ ಶುದ್ಧಳಾಗಿ ಮತ್ತೆ ಅಡಿಗೆ ಮಾಡಿದಳು. ಸುಮತಿ ಬ್ರಾಹ್ಮಣನು ವಿಧಿಪೂರ್ವಕ ಶ್ರಾದ್ಧವನ್ನು ಮಾಡಿ ಬ್ರಾಹ್ಮಣರ ಊಟವಾದ ನಂತರ ಪತ್ನಿಯು ಅವರ ಎಂಜಲನ್ನು ಹೊರಗೆ ಹಾಕದೇ ಒಂದು ತಗ್ಗಿನಲ್ಲಿ ಹಾಕಿ ಮುಚ್ಚಿದಳು. ಇದರಿಂದ ನಾಯಿಗೆ ಉಪವಾಸವಾಗಿ, ಆ ನಾಯಿಯು ರಾತ್ರಿ ವೇಳೆಯಲ್ಲಿ ತನ್ನ ಹಿಂದಿನ ಪತಿಯಾದ ಎತ್ತಿನ ಹತ್ತಿರ ಹೋಗಿ ನಡೆದ ವೃತ್ತಾಂತವನ್ನು ವಿವರಿಸಿ ಹೇಳಿತು.

ಆಗ ಎತ್ತು ಬಹಳ ದುಃಖದಿಂದ ತನ್ನ ಕಥೆಯನ್ನು ಹೇಳಿಕೊಂಡಿತು. “ನಾನು ದಿನವೂ ಭಾರವನ್ನು ಹೊರುತ್ತೇನೆ. ನನ್ನ ಮಗನು ನನ್ನ ಮುಖಕ್ಕೆ ಜಾಳಿಗೆಯನ್ನು ಹಾಕಿ ಮುಖವನ್ನು ಕಟ್ಟಿ ಬಹಳವಾಗಿ ಹೊಡೆದನು. ನಾನೂ ಹಸಿವೆಯಿಂದ ಇರುವೆ. ನನ್ನ ಮಗನು ಇಷ್ಟು ಭಕ್ತಿಯಿಂದ ಶ್ರಾದ್ಧ ಮಾಡಿದರೂ ಅದು ನಮಗೆ ಸುಖಕ್ಕೆ ಕಾರಣವಾಗಲಿಲ್ಲವಾದ್ದರಿಂದ ಅದು ವ್ಯರ್ಥವೇ ಸರಿ”.

ಹೀಗೆ ತಮ್ಮೊಳಗೆ ಮಾತಾಡಿಕೊಳ್ಳುತ್ತಿರುವುದನ್ನು ಕೇಳಿದ ಸುಮತಿಯು ಇವರು ನನ್ನ ತಂದೆ ತಾಯಿಗಳೆಂದು ತಿಳಿದು ಆ ನಡುರಾತ್ರಿಯಲ್ಲಿ ಅವರಿಗೆ ಹೊಟ್ಟೆ ತುಂಬ ಆಹಾರಕೊಟ್ಟು, ಇವರ ನೀಚ ಜನ್ಮ ನಿವೃತ್ತಿಗಾಗಿ ಚಿಂತಿಸಿದನು. ಬೆಳಗಾಗುತ್ತಲೇ ಸುಮತಿಯು ಕಾಡಿಗೆ ಹೋಗಿ ಅಲ್ಲಿ ಜ್ಞಾನ ವೃದ್ಧರಾದ ಋಷಿಗಳನ್ನು ಕಂಡು ನಮಿಸಿ

“ಋಷಿಗಳೇ ! ನನ್ನ ಸದಾಚಾರಿಗಳಾಗಿದ್ದ ತಂದೆ ತಾಯಿಗಳು ಎತ್ತಿನ ಜನ್ಮ, ನಾಯಿಯ ಜನ್ಮ ಪಡೆದಿರುವ ಕಾರಣವನ್ನು ತಿಳಿಸಿರಿ” ಎಂದು ಬೇಡಿಕೊಂಡನು. ಆಗ ಸರ್ವತಪಾ ಎಂಬ ಸರ್ವಜ್ಞರಾದ ಋಷಿಗಳು ಹೇಳಿದರು. ಸುಮತಿಯೇ! ನಿನ್ನ ತಾಯಿ ಹಿಂದಿನ ಜನ್ಮದಲ್ಲಿ ಮುಟ್ಟಾಗಿದ್ದುದು ತಿಳಿದೂ ಮೂರ್ಖತನದಿಂದ ಮನೆಯಲ್ಲಿನ ಪಾತ್ರೆ-ಪಡಗುಗಳನ್ನು ಮುಟ್ಟಿ ಮನೆಕೆಲಸ ಮಾಡಿದಳು. ಈ ಮಹತ್ತಾದ ಪಾಪದಿಂದ ಅವಳು ನಾಯಿಯಾಗಿ ಹುಟ್ಟಿದಳು. ನಿನ್ನ ತಾಯಿಯ ದೋಷದಿಂದ ನಿನ್ನ ತಂದೆಗೆ ಎತ್ತಿನ ಜನ್ಮ ಉಂಟಾಯಿತು. ಇವರಿಬ್ಬರ ನೀಚ ಜನ್ಮ ಕಳೆಯಲು ನೀನು

ಋಷಿಪಂಚಮೀ ವ್ರತವನ್ನು ಮಾಡಿ ಸಪ್ತರ್ಷಿಗಳನ್ನು ಪೂಜಿಸಿ ಏಳು ವರ್ಷಗಳ ವರೆಗೆ ವ್ರತವನ್ನು ಮಾಡಿ ಹಣದ ಅನುಕೂಲತೆಯನ್ನು ನೋಡಿಕೊಂಡು ಈ ವ್ರತದ ಉದ್ಯಾಪನೆಯನ್ನು ಮಾಡಬೇಕು. ವ್ರತ ಮಾಡುವವರು ಉಪವಾಸವಿರಬೇಕು. ವ್ರತ ಮಾಡಿ ಮುಗಿಸಿರುವವರು, ನವಣಿ, ಗೋದಿ, ಮತ್ತು ಹಣ್ಣು ಹಂಪಲನ್ನು ಆಹಾರವಾಗಿ ಸ್ವೀಕರಿಸಬೇಕು.

ಭಾದ್ರಪದ ಶುಕ್ಲ ಪಂಚಮೀ ದಿನ ಮಧ್ಯಾಹ್ನ ನದೀ, ಪುಷ್ಕರಣೀ, ಜಲಾಶಯಗಳಿಗೆ ಹೋಗಿ ನಿರ್ಮಲವಾದ ನೀರಿನಲ್ಲಿ ಮೊದಲು ಉತ್ತರಾಣಿ ಕಡ್ಡಿಗಳಿಂದ ಹಲ್ಲುಗಳನ್ನು ಉಜ್ಜಬೇಕು. ವನಸ್ಪತಿಗೆ ಆಯುಷ್ಯ, ಬಲ, ಯಶ, ವರ್ಚಸ್ಸು, ಪ್ರಜಾ, ಪಶು, ದ್ರವ್ಯ ಇವುಗಳನ್ನು, ವೇದ. ಶಾಸ್ತ್ರಗಳಲ್ಲಿ ನಿಶ್ಚಯ ಜ್ಞಾನವನ್ನು ಕೊಡಬೇಕೆಂದು ಪ್ರಾರ್ಥಿಸಬೇಕು. ಹಲ್ಲುಗಳನ್ನು ಶುದ್ಧ ಮಾಡಿಕೊಂಡು, ಮೃತ್ತಿಕಾ ಪ್ರಾರ್ಥನೆ ಮಾಡಿ ಮೃತ್ತಿಕಾ ಸ್ನಾನ, ನೆಲ್ಲಿ ಕಾಯಿಯಿಂದ ಕೂದಲು ಶುದ್ಧ ಮಾಡಿಕೊಂಡು,

ಶುದ್ಧಸ್ನಾನಮಾಡಿ ಶುಭ್ರವಾದ ಬಿಳಿಬಟ್ಟೆಯನ್ನು ಉಟ್ಟು ನಿತ್ಯಕರ್ಮವನ್ನು ತೀರಿಸಿಕೊಂಡು ಏಕಚಿತ್ತದಿಂದ ಅರುಂಧತಿ ಸಹಿತರಾದ ಪರಮ ಪೂಜ್ಯರಾದ ಸಪ್ತರ್ಷಿಗಳನ್ನು ಪೂಜಿಸಬೇಕು.

’ಕಶ್ಯಪೋತ್ರಿರ್ಭರಾಜೋ ವಿಶ್ವಾಮಿತ್ತೊ ಅಥಗೌತಮಃ | ಜಮದಗ್ನಿ ರ್ವಸಿಷ್ಟಶ್ಚ ಸಾಧೀ ಚೈವಾಪ್ಯರುಂಧತೀ | ಮಂತ್ರೇಣಾನೇನ ಸಪ್ತರ್ಷಿನ್ ಪೂಜಯೇತ್ ಸುಸಮಾಹಿತಃ | ವ್ರತೇನ ಋಷಿಪಂಚಮ್ಮಾಃ ಕೃತೇನೈವ ದ್ವಿಜೋತ್ತಮ | ಋತು ಸಂಪರ್ಕಜೋ ದೋಷಃ ಕ್ಷಯಂ ಯಾಂತಿ ನ ಸಂಶಯಃ ||

ಈ ರೀತಿ ಸಪ್ತರ್ಷಿಗಳನ್ನು ಪೂಜೆ ಮಾಡುವುದರಿಂದ ಋತುಸಂಪರ್ಕದೋಷವು ಬೇರು ಸಹಿತ ನಾಶವಾಗುವದು.

ಸುಮತಿಯು ಸರ್ವತಪಾ ಋಷಿಗಳು ಹೇಳಿದ ಮಾತುಗಳನ್ನು ಕೇಳಿ ಈ ವ್ರತವನ್ನು ಹಿಂದೆ ಯಾರು ಮಾಡಿದ್ದರು ? ಅದರ ವಿಧಾನ ಹೇಗೆ ? ಎಂದು ಕೇಳಲು ಆ ಋಷಿಗಳು ಬ್ರಹ್ಮ ಹಾಗೂ ಸಿತಾಶ್ವರ ಸಂವಾದ ರೂಪ ಕಥೆಯನ್ನು ಹೇಳುವರು-

ಬ್ರಹ್ಮದೇವರು ಸಿತಾಶ್ವನನ್ನು ಕುರಿತು ಹೇಳುವರು. ಸಿತಾಶ್ವರಾಜನೇ ! ಎಲ್ಲ ವ್ರತಗಳಲ್ಲಿ ಶ್ರೇಷ್ಠ ಪಾಪ ಪರಿಹಾರಕವಾದುದು ಋಷಿಪಂಚಮೀ ವ್ರತವು. ಈ ವ್ರತವನ್ನು ಮಾಡುವುದರಿಂದ ನರಕದರ್ಶನವಿಲ್ಲ ಈ ವಿಷಯದಲ್ಲಿ ಹಿಂದಿನ ಒಂದು ಇತಿಹಾಸವನ್ನು ಹೇಳುವೆನು ಕೇಳು-

ಹಿಂದೆ ವಿದರ್ಭ ದೇಶದಲ್ಲಿ ಉತ್ತಂಕ, ಸುಶೀಲಾ ಎಂಬ ಬ್ರಾಹ್ಮಣ ದಂಪತಿಗಳಿದ್ದರು. ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಳು. ಮಗನಿಗೆ ಸಕಲ ಶಾಸ್ತ್ರಾಧ್ಯಯನ ಮಾಡಿಸಿದ್ದನು. ಮಗಳನ್ನು ಒಬ್ಬ ಕುಲೀನ ಬ್ರಾಹ್ಮಣನಿಗೆ ಕೊಟ್ಟು ವಿವಾಹ ಮಾಡಿದ್ದನು. ದುರ್ದೈವದಿಂದ ಮಗಳಿಗೆ ವೈಧವ್ಯ ಬಂದಿತು. ವಿಧವೆಯಾಗಿ ಅವಳು ತಂದೆಯ ಮನೆಯಲ್ಲಿ ಸೇವೆಮಾಡುತ್ತ ಇದ್ದಳು.
ಉತ್ತಂಕನು ತನ್ನ ಮಗನನ್ನು ಮನೆಯಲ್ಲಿಟ್ಟು ತಾನು ತನ್ನ ಹೆಂಡತಿ ಮತ್ತು ಮಗಳ ಜೊತೆಗೆ ಗಂಗಾನದಿಯ ಹತ್ತಿರ ಕಾಡಿಗೆ ಬಂದು ಅಲ್ಲಿಯೇ ಶಿಷ್ಯರಿಗೆ ಪಾಠ ಹೇಳುತ್ತಿದ್ದನು.

ಹೀಗಿರಲು ಒಂದು ದಿನ ತಂದೆಯ ಸೇವೆಯನ್ನು ಮಾಡಿ ಬಹಳ ದಣಿದ ಮಗಳು ರಾತ್ರಿ ಮಲಗಿದ್ದಾಗ ಅವಳ ದೇಹ ಕಾಣಿಸದೇ ಹುಳುರಾಶಿ ಕಂಡಿತು. ಇದನ್ನು ನೋಡಿದ ಶಿಷ್ಯರು ಆಕೆಯ ತಾಯಿಯ ಹತ್ತಿರ ಹೋಗಿ ಹೇಳಿದರು.

ಈ ಮಾತನ್ನು ಕೇಳಿದ ತಾಯಿಯು ಕೂಡಲೇ ತನ್ನ ಮಗಳು ಮಲಗಿದ ಜಾಗೆಗೆ ಬಂದು ನೋಡಿ ಬಹಳ ವ್ಯಸನದಿಂದ ಎದೆಬಡಿದುಕೊಂಡು ಅಳುತ್ತ ಆ ದುಃಖವನ್ನು ಸಹಿಸದೇ ಮೂರ್ಛಿಗೊಂಡಳು. ಮತ್ತೆ ಎಚ್ಚರಗೊಂಡ ಮೇಲೆ ತನ್ನ ಹತ್ತಿರ ಎದ್ದು ಕುಳಿತ ಮಗಳನ್ನು ಸರಿಯಾಗಿ ಕೂಡಿಸಿ ಅವಳ ಕಣ್ಣಿಗೆ ನೀರನ್ನು ಹಚ್ಚಿ ಅವಳ ತಂದೆಯ ಹತ್ತಿರ ಕರೆದುಕೊಂಡು ಬಂದು ”ಪತಿದೇವರೇ ! ನಿನ್ನ ಮಗಳು ಯಾವ ಪಾಪದಿಂದ ಮಧ್ಯರಾತ್ರಿ ಮಲಗಿದಾಗ ಹುಳುರಾಶಿಯಾದಳು ತಿಳಿಸಿರಿ” ಎಂದಳು.

ಉತ್ತಂಕನು ಜ್ಞಾನ ದೃಷ್ಟಿಯಿಂದ ತನ್ನ ಮಗಳ ಪೂರ್ವವೃತ್ತಾಂತವನ್ನು ತಿಳಿದು ಹೇಳಿದನು. ಇವಳು ತನ್ನ ಹಿಂದಿನ ಏಳನೇ ಜನ್ಮದಲ್ಲಿ ಒಬ್ಬ ಬ್ರಾಹ್ಮಣನ ಹೆಂಡತಿಯಾಗಿದ್ದಳು. ತಾನು ಮುಟ್ಟಾಗಿದ್ದಾಗ ಮನೆಯ ಕೆಲಸಗಳನ್ನು ಸ್ವತಃ ಮುಟ್ಟಿ ಮಾಡಿದ್ದರಿಂದ ಅವಳ ದೇಹ ಮಲಗಿದ್ದಾಗ ಹುಳುರಾಶಿಯಾಯಿತು. ಏಕೆಂದರೆ ಮುಟ್ಟಾದವರು ಮೂರುದಿನ ಮನೆಕೆಲಸ, ಪಾತ್ರೆಗಳನ್ನು ಮುಟ್ಟಕೂಡದು.

ಈ ಮಗಳು ಅದೇ ಜನ್ಮದಲ್ಲಿ ಸ್ನೇಹಿತೆಯರಿಂದ ಸೇರಿ ಋಷಿಪಂಚಮಿ ವ್ರತಕ್ಕೆ ಅವಮಾನ ಮಾಡಿದಳು. ಆದರೂ ವ್ರತ ನೋಡಿದ ಪುಣ್ಯದಿಂದ ಬ್ರಾಹ್ಮಣ ಜನ್ಮದಲ್ಲಿ ಹುಟ್ಟಿದ್ದು, ವ್ರತಕ್ಕೆ ಅವಮಾನ ಮಾಡಿದ್ದರಿಂದ ಈ ಜನ್ಮದಲ್ಲಿ ಹುಳುರಾಶಿಯಾದಳು. ಈ ಎಲ್ಲವನ್ನು ಕೇಳಿ ಸುಶೀಲೆಯು ಋಷಿಪಂಚಮಿ ವ್ರತವನ್ನು ವಿವರಿಸಬೇಕೆಂದು ಕೇಳಲು ಬ್ರಾಹ್ಮಣನು ಹೇಳ ತೊಡಗಿದನು-

ಈ ಋಷಿಪಂಚಮೀ ವ್ರತ ಮಾಡುವುದರಿಂದ ರಜಸ್ಸಂಪರ್ಕದೋಷ, ಅಧಿಭೌತಿಕ, ಆಧಿ ದೈವಿಕ, ಆಧ್ಯಾತ್ಮಿಕ ದುಃಖಗಳಿಂದ ಮುಕ್ತರಾಗುವರು. ಅವರಿಗೆ ಎಲ್ಲ ರೀತಿ ಮಂಗಳ ಉಂಟಾಗುವದು. ಐಶ್ವರ್ಯವೃದ್ಧಿಯಾಗಿ ಆಪತ್ತುಗಳು ನಾಶವಾಗುವವು.

ಪಂಚಮೀದಿನ ಯಥಾವಿಧಿ ಸಂಕಲ್ಪ ಪೂರ್ವಕ ಸ್ನಾನಮಾಡಿ ಶುಭ್ರ ವಸ್ತ್ರವನ್ನುಟ್ಟು ನಿತ್ಯಕರ್ಮ ಮಾಡಿ, ಋಷಿಗಳನ್ನು ಸ್ಥಾಪನೆ ಮಾಡಿ ಅವರಿಗೆ ಪಂಚಾಮೃತ, ಚಂದನ, ಆಗರು, ಕರ್ಪೂರ, ಸುಗಂಧ ಪುಷ್ಪ ಧೂಪ, ದೀಪ, ಯಜ್ಯೋಪವೀತ ಫಲಸಮರ್ಪಣ ಮಾಡಿ ಅರ್ಥ್ಯ ಬಿಡಬೇಕು. ನಂತರ ಮರುದಿನ ಬ್ರಾಹ್ಮಣ ಸುವಾಸಿನೀ ಭೋಜನ ಮಾಡಿಸಿ, ತನ್ನ ಶಕ್ತಿಗೆ ಅನುಗುಣವಾಗಿ ವಸ್ತ್ರ, ದಕ್ಷಿಣೆ ಕೊಡಬೇಕು.

ವ್ರತಮಾಡುವ ಹೆಣ್ಣು ಮಗಳು ಗಂಡನ ಅನುಮತಿಯನ್ನು ಪಡೆದು ಆಚರಿಸಬೇಕು.

ವಿಧವೆಯು ಬ್ರಾಹ್ಮಣರ ಅನುಮತಿ ಕೇಳಿ ತನ್ನ ಸ್ವಂತ ಪ್ರಯತ್ನದಿಂದ ಈ ವ್ರತ ಮಾಡಿ ಕಥೆಯನ್ನು ಕೇಳಿ ವ್ರತಸ್ಥರಾಗಿ ಆದಿನವನ್ನು ಕಳೆಯಬೇಕು.

ಸುಶೀಲೆಯು ಮಗಳ ಕಡೆಯಿಂದ ಈ ಋಷಿಪಂಚಮೀ ವ್ರತವನ್ನು ಭಕ್ತಿ ಪೂರ್ವಕ ಮಾಡಿಸಿದಳು. ಈ ವ್ರತ ಪ್ರಭಾವದಿಂದ ಅವಳು ಉತ್ತಮವಾದ ಗತಿಯನ್ನು ಹೊಂದಿದಳು.

ಧರ್ಮರಾಜನೇ ! ಸುಮತಿಯು ಕೂಡಲೇ ಮನೆಗೆ ಹೋಗಿ ತನ್ನ ಹೆಂಡತಿಯಿಂದ ಕೂಡಿ ಭಕ್ತಿಯಿಂದ ಋಷಿಗಳ ಪೂಜೆಮಾಡಿ ತನಗೆ ಬಂದ ಪುಣ್ಯ ಫಲವನ್ನು ತನ್ನ ತಂದೆ-ತಾಯಿಗಳಿಗೆ ಧಾರೆಯೆರೆದು ಕೊಟ್ಟನು. ವ್ರತದ ಪ್ರಭಾವದಿಂದ ತಾಯಿಯ ನಾಯಿಜನ್ಮ ಹೋಗಿ ಸ್ವರ್ಗ ಸೇರಿದಳು. ತಂದೆಯು ಎಲ್ಲರಿಂದ ಸ್ತುತಿಸಿಕೊಂಡವನಾಗಿ ಸತ್ಯಲೋಕ ಸೇರಿದನು.

ಈ ಋಷಿಪಂಚಮೀ ವ್ರತದ ಪ್ರಭಾವದಿಂದ ಶರೀರ, ಮಾತು, ಮನಸ್ಸುಗಳಿಂದ ಎಸಗಿದ ಪಾಪಗಳು ನಾಶವಾಗುವವು. ಮನೆಯಲ್ಲಿ ಧನ, ಧಾನ್ಯ, ಸಂತತಿ ವೃದ್ಧಿಯಾಗುವದು.

ಏತ ಕಥಿತಂ ರಾಜನ್ ವ್ರತಾನಾಂ ಉತ್ತಮಂ ವ್ರತಂ |
ಸರ್ವ ಸಂಪತ್ ಪ್ರದಂ ಚೈವ ನಾರೀಣಾಂ ಪಾಪನಾಶನಂ ||
ಯೇ ಚ ಶೃಣ್ವಂತಿ ಸತತಂ ಯೇ ಪಠಂತಿ ಚ ಮಾನವಾಃ |
ತೇ ಸರ್ವೆ ಪಾಪನಿರ್ಮುಕ್ತಾಃ ಯಾಸ್ಕಂತಿ ಚ ಪರಾಂಗತಿಂ ||

ಧರ್ಮರಾಜನೇ ! ವ್ರತಗಳಲ್ಲಿ ಉತ್ತಮವಾದ ಈ ವ್ರತವು ನಿನಗೋಸ್ಕರ ಹೇಳಲ್ಪಟ್ಟಿತು. ಸ್ತ್ರೀಯರಿಗೆ ಪಾಪನಾಶಕವಾಗಿ ಎಲ್ಲ ಸಂಪತ್ತನ್ನು ಕೊಡುತ್ತದೆ.
ಈ ಕಥೆಯನ್ನು ಯಾರು ಕೇಳುವರೋ, ಹೇಳುವರೋ ಅವರೆಲ್ಲ ರೂ ಪಾಪಗಳಿಂದ ಮುಕ್ತರಾಗಿ ಉಮವಾದ ಗತಿಯನ್ನು ಹೊಂದುತ್ತಾರೆ.

|| ಇತಿ ಶ್ರೀ ಭವಿಷೋತ್ತರ ಪುರಾಣೇ ಕೃಷ್ಣಯುಧಿಷ್ಠಿರ
ಸಂವಾದೇ ಋಷಿಪಂಚಮೀ ಪೂಜಾಕಥಾ ಸಂಪೂರ್ಣಾ ||

|| ಶ್ರೀಮಧ್ವೇಶಾರ್ಪಣಮಸ್ತು ||


SrI BaviShyOttara purANE RuShipaMcamI kathA

yudhiShThara uvAca-

SrutAni dEva dEvESa vratAni subahUni ca |
sAMprataM tu anyadAcakShva vrataM pApa praNASanaM ||

SrIkRuShNa uvAca-

athAnyadapi rAjEMdra paMcamI RuShi saMj~jekAM |
pravakShyAmi ca yAM kRutvA nArI pApAt pramucyatE ||

dharmarAjanu SrIkRuShNanannu kuritu hELuttAne- SrIkRuShNanE !
ninniMda anEka vratagaLannu kELidenu. Iga ellA pApagaLannu nASa mADuvaMthA innoMdu vratavannu hELu.

SrIkRuShNanu hELuvanu- dharmarAja ! heNNu makkaLu yAva vratavannu mADuvudariMda pApadiMda muktarAguvarO aMtaha
“RuShipaMcamI” eMba vratavide adannu hELuvenu.

strIyaru rajasvaleyarAdAga tanage tiLidO, tiLiyadeyO tanna mane kelasada kAraNakkAgi pAtre muMtAdavugaLannu muTTuvaLO, A mahApApadiMda narakakke hOguvaLu.
adakkAgi brAhmaNa, kShatriya, vaiSya, SUdra I nAlkU varNada janaru avaLannu mUrudina dUraviDabEku. adakke kAraNa hIgide.

hiMde iMdranu obba brAhmaNana maganAda vRutrAsuranannu saMhAra mADiddariMda iMdranige brahma hatye dOSha baMditu.
idariMda kAMtihInanAda iMdranu mahattaravAda pApadiMda biDugaDe hoMdalu brahmadEvarige moreyiTTanu. brahmadEvaru iMdrana sthitiyannu nODi kShaNa kAla yOcisi naMtara saMtOShadiMda iMdranu pApadiMda biDugaDeyAguvaMte mADidanu.

brahmahatyeyannu nAlku viBAga mADi nAlku sthAnagaLalliTTanu. modala BAgavannu beMkiya modalina jvAleyalli, eraDaneya BAgavannu modalu baMda nIrinalli, mUraneya BAgavannu parvatada SiKara hAgU maragiDagaLalli, koneya BAgavannu heNNu makkaLa rajassinalli iTTanu. AddariMda rajasvaleyarAda heNNu makkaLannu prayatna pUrvakavAgi brahmadEvara Aj~jeyaMte nAlku varNadavarU dUra iDabEku.

muTTAda strIyu modaladina holeyaraMte, eraDaneyadina brahmaGAtiniyaMte, mUraneyadina rajaka (agasara)raMte apavitraLiddu nAlkaneyadina gaMDana sEvege mAtra SuddhaLu horatu, dEvakArya, pitRukAryagaLige aidaneyadinavE SuddhaLAguvaLu. AddariMda muTTAda dinagaLalli tiLidO, tiLiyadeyO muTTi manegelasa mADida pApavannu hOgalADisikoLLalu I “RuShipaMcamI” vratavannu mADabEku. I vratavu ella pApagaLannu nASapaDisuttade. kAraNa nAlkU varNada strIyaru avaSyavAgi muTTu niMta mEle mADabEku. I viShayavAgi SrIkRuShNanu pUrvakAladalli naDeda oMdu katheyannu hELuvanu-

hiMde vidarBadESadalli prajegaLannu tanna makkaLaMte kANuva “sEnajit” eMba rAjaniddanu. avana rAjyadalli vEda vEdAMgagaLannu tiLidavanu. prANidayeyuLLa ‘sumitra’neMba brAhmaNanu okkalutanadiMda tanna jIvanavannu naDesuttiddanu. avanige sAdhya, SiKAmaNiyAda jayaSrI eMba anurUpaLAda heMDati iddaLu. ivara maneyalli kelasadavaru, snEhitaru, neMTaru, iShTaru ellarU kUDiyE vAsisuttiddaru. ellara hoTTe tuMbuvadu hEgeMba ciMteyiMda maLegAladalli manekelasa mugida mEle holakke hOgi alli manassugoTTu holada kelasavannu jayaSrIyu mADuttiddaLu.

hIgiralu omme avaLu muTTAdaLu. I kAladalli maneya pAtre paDagugaLannu muTTi kelasa mADidaLu. muMde kelakAla kaLeda mEle avaLu maraNa hoMdidaLu. Akeya gaMDanU svalpu dinagaLa naMtara maraNa hoMdidanu. hIge avaribbarU vidhivaSarAda mEle muMde jayaSrIyu nAyiya janmavannu, sumitranu ettina janmavannu paDedaru.

hiMdina janmadalli ivaru svaMta dharmAcaraNeyannu mADiddariMda pUrvajanmada smaraNeyiddu ibbarU tamma magana maneyallE tamma hiMdina karmagaLannu neneyutta nAyi, ettina janmavannu hoMdi vAsavAgiddaru. maganAda sumatiyu gurusEve. atithi, dEvatA sEvegaLannu BaktiyiMda mADuttiddanu. hIgiralu Atana taMdeya SrAdda baralu sumatiyu tanna heMDatiyAda caMdravatige hIge hELidanu. “I dina nanna taMdeya SrAddhavide. brAhmaNarige BOjana mADisabEku. nInu aDigeyannu mADeMdu hELalu”

Akeyu gaMDana Aj~jeyaMte aDige mADutta pAyasada pAtreyannu oleya mEle iTTiralu adaralli hAvu tanna viShavannu biTTitu. idannu A nAyiyu nODi “I pAyasavannu brAhmaNarutinnalu viShavEri sAyuvaru nanna maganige brahmahatye dOSha baruttade” eMdu vicArisi, mahattaravAda brahmahatyA dOShakke hedari tAnu hOgi aDigeyannu muTTitu.

idannu kaMDa caMdravatiyu kOpadiMda A nAyiyannu uriyuva kaTTigeyiMda hoDedu, apavitravAda pAtregaLannu toLedu, tAnu snAnamADi SuddhaLAgi matte aDige mADidaLu. sumati brAhmaNanu vidhipUrvaka SrAddhavannu mADi brAhmaNara UTavAda naMtara patniyu avara eMjalannu horage hAkadE oMdu tagginalli hAki muccidaLu. idariMda nAyige upavAsavAgi, A nAyiyu rAtri vELeyalli tanna hiMdina patiyAda ettina hattira hOgi naDeda vRuttAMtavannu vivarisi hELitu.

Aga ettu bahaLa duHKadiMda tanna katheyannu hELikoMDitu. “nAnu dinavU BAravannu horuttEne. nanna maganu nanna muKakke jALigeyannu hAki muKavannu kaTTi bahaLavAgi hoDedanu. nAnU hasiveyiMda iruve. nanna maganu iShTu BaktiyiMda SrAddha mADidarU adu namage suKakke kAraNavAgalillavAddariMda adu vyarthavE sari”.

hIge tammoLage mAtADikoLLuttiruvudannu kELida sumatiyu ivaru nanna taMde tAyigaLeMdu tiLidu A naDurAtriyalli avarige hoTTe tuMba AhArakoTTu, ivara nIca janma nivRuttigAgi ciMtisidanu. beLagAguttalE sumatiyu kADige hOgi alli j~jAna vRuddharAda RuShigaLannu kaMDu namisi

“RuShigaLE ! nanna sadAcArigaLAgidda taMde tAyigaLu ettina janma, nAyiya janma paDediruva kAraNavannu tiLisiri” eMdu bEDikoMDanu. Aga sarvatapA eMba sarvaj~jarAda RuShigaLu hELidaru. sumatiyE! ninna tAyi hiMdina janmadalli muTTAgiddudu tiLidU mUrKatanadiMda maneyallina pAtre-paDagugaLannu muTTi manekelasa mADidaLu. I mahattAda pApadiMda avaLu nAyiyAgi huTTidaLu. ninna tAyiya dOShadiMda ninna taMdege ettina janma uMTAyitu. ivaribbara nIca janma kaLeyalu nInu

RuShipaMcamI vratavannu mADi saptarShigaLannu pUjisi ELu varShagaLa varege vratavannu mADi haNada anukUlateyannu nODikoMDu I vratada udyApaneyannu mADabEku. vrata mADuvavaru upavAsavirabEku. vrata mADi mugisiruvavaru, navaNi, gOdi, mattu haNNu haMpalannu AhAravAgi svIkarisabEku.

BAdrapada Sukla paMcamI dina madhyAhna nadI, puShkaraNI, jalASayagaLige hOgi nirmalavAda nIrinalli modalu uttarANi kaDDigaLiMda hallugaLannu ujjabEku. vanaspatige AyuShya, bala, yaSa, varcassu, prajA, paSu, dravya ivugaLannu, vEda. SAstragaLalli niScaya j~jAnavannu koDabEkeMdu prArthisabEku. hallugaLannu Suddha mADikoMDu, mRuttikA prArthane mADi mRuttikA snAna, nelli kAyiyiMda kUdalu Suddha mADikoMDu,

SuddhasnAnamADi SuBravAda biLibaTTeyannu uTTu nityakarmavannu tIrisikoMDu EkacittadiMda aruMdhati sahitarAda parama pUjyarAda saptarShigaLannu pUjisabEku.

‘kaSyapOtrirBarAjO viSvAmitto athagautamaH | jamadagni rvasiShTaSca sAdhI caivApyaruMdhatI | maMtrENAnEna saptarShin pUjayEt susamAhitaH | vratEna RuShipaMcammAH kRutEnaiva dvijOttama | Rutu saMparkajO dOShaH kShayaM yAMti na saMSayaH ||

I rIti saptarShigaLannu pUje mADuvudariMda RutusaMparkadOShavu bEru sahita nASavAguvadu.

sumatiyu sarvatapA RuShigaLu hELida mAtugaLannu kELi I vratavannu hiMde yAru mADiddaru ? adara vidhAna hEge ? eMdu kELalu A RuShigaLu brahma hAgU sitASvara saMvAda rUpa katheyannu hELuvaru-

brahmadEvaru sitASvanannu kuritu hELuvaru. sitASvarAjanE ! ella vratagaLalli SrEShTha pApa parihArakavAdudu RuShipaMcamI vratavu. I vratavannu mADuvudariMda narakadarSanavilla I viShayadalli hiMdina oMdu itihAsavannu hELuvenu kELu-

hiMde vidarBa dESadalli uttaMka, suSIlA eMba brAhmaNa daMpatigaLiddaru. avarige obba maga mattu obba magaLiddaLu. maganige sakala SAstrAdhyayana mADisiddanu. magaLannu obba kulIna brAhmaNanige koTTu vivAha mADiddanu. durdaivadiMda magaLige vaidhavya baMditu. vidhaveyAgi avaLu taMdeya maneyalli sEvemADutta iddaLu.
uttaMkanu tanna maganannu maneyalliTTu tAnu tanna heMDati mattu magaLa jotege gaMgAnadiya hattira kADige baMdu alliyE SiShyarige pATha hELuttiddanu.

hIgiralu oMdu dina taMdeya sEveyannu mADi bahaLa daNida magaLu rAtri malagiddAga avaLa dEha kANisadE huLurASi kaMDitu. idannu nODida SiShyaru Akeya tAyiya hattira hOgi hELidaru.

I mAtannu kELida tAyiyu kUDalE tanna magaLu malagida jAgege baMdu nODi bahaLa vyasanadiMda edebaDidukoMDu aLutta A duHKavannu sahisadE mUrCigoMDaLu. matte eccaragoMDa mEle tanna hattira eddu kuLita magaLannu sariyAgi kUDisi avaLa kaNNige nIrannu hacci avaLa taMdeya hattira karedukoMDu baMdu ”patidEvarE ! ninna magaLu yAva pApadiMda madhyarAtri malagidAga huLurASiyAdaLu tiLisiri” eMdaLu.

uttaMkanu j~jAna dRuShTiyiMda tanna magaLa pUrvavRuttAMtavannu tiLidu hELidanu. ivaLu tanna hiMdina ELanE janmadalli obba brAhmaNana heMDatiyAgiddaLu. tAnu muTTAgiddAga maneya kelasagaLannu svataH muTTi mADiddariMda avaLa dEha malagiddAga huLurASiyAyitu. EkeMdare muTTAdavaru mUrudina manekelasa, pAtregaLannu muTTakUDadu.

I magaLu adE janmadalli snEhiteyariMda sEri RuShipaMcami vratakke avamAna mADidaLu. AdarU vrata nODida puNyadiMda brAhmaNa janmadalli huTTiddu, vratakke avamAna mADiddariMda I janmadalli huLurASiyAdaLu. I ellavannu kELi suSIleyu RuShipaMcami vratavannu vivarisabEkeMdu kELalu brAhmaNanu hELa toDagidanu-

I RuShipaMcamI vrata mADuvudariMda rajassaMparkadOSha, adhiBautika, Adhi daivika, AdhyAtmika duHKagaLiMda muktarAguvaru. avarige ella rIti maMgaLa uMTAguvadu. aiSvaryavRuddhiyAgi ApattugaLu nASavAguvavu.

paMcamIdina yathAvidhi saMkalpa pUrvaka snAnamADi SuBra vastravannuTTu nityakarma mADi, RuShigaLannu sthApane mADi avarige paMcAmRuta, caMdana, Agaru, karpUra, sugaMdha puShpa dhUpa, dIpa, yajyOpavIta PalasamarpaNa mADi arthya biDabEku. naMtara marudina brAhmaNa suvAsinI BOjana mADisi, tanna Saktige anuguNavAgi vastra, dakShiNe koDabEku.

vratamADuva heNNu magaLu gaMDana anumatiyannu paDedu AcarisabEku.

vidhaveyu brAhmaNara anumati kELi tanna svaMta prayatnadiMda I vrata mADi katheyannu kELi vratastharAgi Adinavannu kaLeyabEku.

suSIleyu magaLa kaDeyiMda I RuShipaMcamI vratavannu Bakti pUrvaka mADisidaLu. I vrata praBAvadiMda avaLu uttamavAda gatiyannu hoMdidaLu.

dharmarAjanE ! sumatiyu kUDalE manege hOgi tanna heMDatiyiMda kUDi BaktiyiMda RuShigaLa pUjemADi tanage baMda puNya Palavannu tanna taMde-tAyigaLige dhAreyeredu koTTanu. vratada praBAvadiMda tAyiya nAyijanma hOgi svarga sEridaLu. taMdeyu ellariMda stutisikoMDavanAgi satyalOka sEridanu.

I RuShipaMcamI vratada praBAvadiMda SarIra, mAtu, manassugaLiMda esagida pApagaLu nASavAguvavu. maneyalli dhana, dhAnya, saMtati vRuddhiyAguvadu.

Eta kathitaM rAjan vratAnAM uttamaM vrataM |
sarva saMpat pradaM caiva nArINAM pApanASanaM ||
yE ca SRuNvaMti satataM yE paThaMti ca mAnavAH |
tE sarve pApanirmuktAH yAskaMti ca parAMgatiM ||

dharmarAjanE ! vratagaLalli uttamavAda I vratavu ninagOskara hELalpaTTitu. strIyarige pApanASakavAgi ella saMpattannu koDuttade.
I katheyannu yAru kELuvarO, hELuvarO avarella rU pApagaLiMda muktarAgi umavAda gatiyannu hoMduttAre.

|| iti SrI BaviShOttara purANE kRuShNayudhiShThira
saMvAdE RuShipaMcamI pUjAkathA saMpUrNA ||

|| SrImadhvESArpaNamastu ||

Leave a Reply

You might also like

error: Content is protected !!