Guru Vyasarayara mahime

Composer : Shri Purandara dasaru

By Smt.Shubhalakshmi Rao

ಗುರು ವ್ಯಾಸರಾಯರ ಮಹಿಮೆಗಳ ಕೇಳಿ |ಪ|
ಹರುಷದಿಂ ಕೊಂಡಾಡಿ ನಲಿದಾಡಿ ಜನರು |ಅ.ಪ|

ಅಂದು ಬ್ರಹ್ಮಣ್ಯತೀರ್ಥರಿಗೆ ಬದರಿಯಲಿ |
ಮುದದಿಂದ ನರನಾರಾಯಣರು |
ಕಂದನ್ನ ಕೊಡುವೆನೆಂದು | ಭಿಕ್ಷೆಯ ನೀಡೆ |
ತಂದೆ ಮಧ್ವೇಶ ನಿನ್ನ ದಯವಿರಲಿ ಎಂದೂ |೧|

ಮುನ್ನ ಬ್ರಹ್ಮಣ್ಯತೀರ್ಥರು | ಸಂಚರಿಸುತ್ತ |
ಬನ್ನೂರು ಮಾರ್ಗದಲಿ | ಬರುತಲಿರಲು |
ಕನ್ಯೆಯೊಬ್ಬ ಳು ತನ್ನ | ಪತಿಯ ಭಿಕ್ಷೆ ಬೇಡೆ |
ಚೆನ್ನಾಗಿ ಮಾಂಗಲ್ಯ ಕರುಣಿಸಿತ್ತರು ಅಂದೂ |೨|

ನಿನ್ನಲ್ಲಿ ಮೊದಲು ಜನಿಸಿದ ಆ ಪುತ್ರನ |
ಸನ್ಮಾನ್ಯದಿಂದೆಮಗೆ ಕೊಡು ಎನ್ನಲೂ |
ಧನ್ಯಳಾದೆನು ಎಂದು ಪಾದಕ್ಕೆ ಎರಗುತ್ತ |
ಸಮ್ಮಾನದಲಿ ಮಾಂಗಲ್ಯ ಪಡೆದೆನೆಂದು |೩|

ತಂದೆ ತಾಯಿಗೆ ಆನಂದವಾಗಲು ಗರ್ಭ |
ಅಂದು ಶಿಶು ಜನಿಸುವಾ ಸಮಯದಲ್ಲೀ |
ಬಂದು ಶ್ರೀ ಬ್ರಹ್ಮಣ್ಯತೀರ್ಥ ಮುನಿಗಳಿಗೊರೆಯೆ |
ಕಂದಗ್-ಹರಿವಾಣದಿ ಜನನವಾಗಲಿ ಎಂದೂ |೪|

ಚಿನ್ನದ್ ಹರಿವಾಣದಲ್ಲಿ | ಕಂದನ್ನ ಮಲಗಿಸಿ ಪಾ- |
ವನ್ನ ನಾ ಮೇಳದಿ ಮಠಕೆ ತರಲು |
ಪುಣ್ಯಗೆ ಶಿಶುವಿಗೆ ಜಾತಕರ್ಮವನೆ ಮಾಡೀ |
ಚನ್ನ ವ್ಯಾಸರಾಯನೆಂಬ ಹೆಸರಿಟ್ಟರೆಂದೂ |೫|

ಸುರಭಿ ಮಾಲೆಯನ್ನು ಶಿಶುವಿಗುಣಿಸುತಲಂದು |
ಪರಿಪರಿಯಲಿ ಬೆಳೆಸಿ ಸೊಬಗಿನಿಂದ |
ಅರಳೆಲೆ ಪೂಗಾಯಿ ಕರ್ಣ ಕುಂಡಲವಿಟ್ಟು
ಸರಪಳೀ ಪದಕ ಹುಲಿಯುಗುರು ಕಟ್ಟಿದರಾಗ |೬|

ಕಿರುಗೆಜ್ಜೆ ಅಂದುಗೆ ತೋಳ ತಾಯತ ಮಣಿ |
ಮೆರೆವ ಸೊಬಗಿನಿಂದ ಶಶಿಯಂತೆ ಮೆರೆಯೆ|
ವರುಷವೈದರಲಿ ಕೋವಿದರೆಲ್ಲ ನೆರೆದೂ |
ಹರುಷದಿಂ ಮಂತ್ರೋಪದೇಶ ಮಾಡಿದರೆಂದೂ |೭|

ಆದರವ ಮಾಡಿ ಆಗ್ರಜರೆಲ್ಲ ನೆರೆದಿರೆ |
ಮೋದ ದಕ್ಷಿಣೆಯಿಂದ | ಸಂತುಷ್ಟಿ ಪಡಿಸಿ |
ಆದರಿಸಿ ಮೃಷ್ಟಾನ್ನ ಭೋಜನವ ಮಾಡಿಸಿ |
ಮೋದಿತರಾದರಾ ಬ್ರಹ್ಮಣ್ಯ ತೀರ್ಥರೆಂದೂ |೮|

ಹೊಳೆವ ಕರ್ಣದಿ ಸುವರ್ಣ ಕುಂಡಲವಿಟ್ಟು |
ಬಳಸಿ ನಡುವಿಗೆ ಸುವರ್ಣ ಮೌಂಜಿಯನು ಕಟ್ಟಿ |
ತಳಿತ ಸಂತೋಷದಿ ಭವತಿ ಭಿಕ್ಷಾನ್ನಗಳ
ಬೇಡಿಸಿತ್ತರಾಗ | ಬ್ರಹ್ಮಣ್ಯ ತೀರ್ಥರಂದೂ |೯|

ವರುಷ ಸಪ್ತದಿ ವ್ಯಾಸೇಂದ್ರಗೆ ತುರ್ಯವ |
ಹರುಷದಿಂ ಬ್ರಹ್ಮಣ್ಯತೀರ್ಥರು ಕೊಡಲು |
ಕರದಲಿ ದಂಡ ಕಮಂಡಲವ ಧರಿಸಿ |
ಗುರುಗಳ ಚರಣಕೆ ಎರಗಿದರೆಂದೂ |೧೦|

ವ್ಯಾಸರಾಯರೆಂಬ ಕಲ್ಪಲತೆ ಚರಿತೆಯ |
ಲೇಸಾಗಿ ಬಣ್ಣಿಪರು ಸಾಧು ಜನರೂ |
ವಾಸುದೇವ ನಮ್ಮ ಪುರಂದರವಿಠ್ಠಲನ್ನ
ದಾಸರೆಂದನುದಿನದಿ ಕೊಂಡಾಡಿದರೆಂದೂ |೧೧|


guru vyAsarAyara mahimegaLa kELi |pa|
haruShadiM koMDADi nalidADi janaru |a.pa|

aMdu brahmaNyatIrtharige badariyali |
mudadiMda naranArAyaNaru |
kaMdanna koDuveneMdu | BikSheya nIDe |
taMde madhvESa ninna dayavirali eMdU |1|

munna brahmaNyatIrtharu | saMcarisutta |
bannUru mArgadali | barutaliralu |
kanyeyobba Lu tanna | patiya BikShe bEDe |
cennAgi mAMgalya karuNisittaru aMdU |2|

ninnalli modalu janisida A putrana |
sanmAnyadiMdemage koDu ennalU |
dhanyaLAdenu eMdu pAdakke eragutta |
sammAnadali mAMgalya paDedeneMdu |3|

taMde tAyige AnaMdavAgalu garBa |
aMdu SiSu janisuvA samayadallI |
baMdu shrI brahmaNyatIrtha munigaLigoreye |
kaMdag-harivANadi jananavAgali eMdU |4|

cinnad harivANadalli | kaMdanna malagisi pA- |
vanna nA mELadi maThake taralu |
puNyage SiSuvige jAtakarmavane mADI |
canna vyAsarAyaneMba hesariTTareMdU |5|

suraBi mAleyannu SiSuviguNisutalaMdu |
paripariyali beLesi sobaginiMda |
araLele pUgAyi karNa kuMDalaviTTu
sarapaLI padaka huliyuguru kaTTidarAga |6|

kirugejje aMduge tOLa tAyata maNi |
mereva sobaginiMda SaSiyaMte mereye|
varuShavaidarali kOvidarella neredU |
haruShadiM maMtrOpadESa mADidareMdU |7|

Adarava mADi Agrajarella neredire |
mOda dakShiNeyiMda | saMtuShTi paDisi |
Adarisi mRuShTAnna BOjanava mADisi |
mOditarAdarA brahmaNya tIrthareMdU |8|

hoLeva karNadi suvarNa kuMDalaviTTu |
baLasi naDuvige suvarNa mauMjiyanu kaTTi |
taLita saMtOShadi Bavati BikShAnnagaLa
bEDisittarAga | brahmaNya tIrtharaMdU |9|

varuSha saptadi vyAsEMdrage turyava |
haruShadiM brahmaNyatIrtharu koDalu |
karadali daMDa kamaMDalava dharisi |
gurugaLa caraNake eragidareMdU |10|

vyAsarAyareMba kalpalate cariteya |
lEsAgi baNNiparu sAdhu janarU |
vAsudEva namma puraMdaraviThThalanna
dAsareMdanudinadi koMDADidareMdU |11|

Leave a Reply

You might also like

error: Content is protected !!