Composer : Shri Gurujagannatha dasaru
ವಾದಿರಾಜ ಪಾಲಿಸು ಎನ್ನ ||ಪ||
ವಾದಿರಾಜ ತವ ಪಾದಸರೋಜ
ಮೋದಪರಾಗವ ಸಾದರ ನೀಡಿ ||ಅ.ಪ||
ಮೋದತೀರ್ಥ ಸುಮತೋದಧಿ ಚಂದಿರ
ಪಾದವ ನಂಬಿದೆ ನೀ ದಯದಲಿ ||೧||
ಆರ್ತ ಜನರ ಮನದಾರ್ತಿಯ ಕಳೆದಿಹ
ವಾರ್ತದಿ ಬಂದವನಾರ್ತಿಯ ಬಿಡಿಸೋ ||೨||
ಎಲ್ಲರಂತೆ ನೀನಲ್ಲವೋ ಜಗದೊಳು
ಬಲ್ಲಿದನೆಂಬೋದು ಬಲ್ಲೆ ಬಲ್ಲೆನು ||೩||
ಕರ್ತುಮಕರ್ತು ಸಮರ್ಥನೆ ಎನ್ನನು
ಮರ್ತರೆ ಅನ್ಯ ಸಮರ್ಥರ ಕಾಣೆ ||೪||
ಕಾಮಧೇನು ಸಮ ಭೂಮಿಯ ತಳದಿ
ಕಾಮಿತ ನೀಡೈ ಸುರತರುವೆ ||೫||
ಮೋಕ್ಷದ ಕರುಣ ಕಟಾಕ್ಷದಿ ಎನ್ನ
ವೀಕ್ಷಿಸಿ ಮನದಾಪೇಕ್ಷವ ಸಲಿಸೋ ||೬||
ಯಾತಕೆ ಎನ್ನನು ಈ ತೆರ ಮಾಡಿದೆ
ನೀತ ಗುರುಜಗನ್ನಾಥವಿಠ್ಠಲ ದೂತ ||೭||
vAdirAja pAlisu enna ||pa||
vAdirAja tava pAdasarOja
mOdaparAgava sAdara nIDi ||a.pa||
mOdatIrtha sumatOdadhi caMdira
pAdava naMbide nI dayadali ||1||
Arta janara manadArtiya kaLediha
vArtadi baMdavanArtiya biDisO ||2||
ellaraMte nInallavO jagadoLu
ballidaneMbOdu balle ballenu ||3||
kartumakartu samarthane ennanu
martare anya samarthara kANe ||4||
kAmadhEnu sama BUmiya taLadi
kAmita nIDai surataruve ||5||
mOkShada karuNa kaTAkShadi enna
vIkShisi manadApEkShava salisO ||6||
yAtake ennanu I tera mADide
nIta gurujagannAthaviThThala dUta ||7||

Leave a Reply
You must be logged in to post a comment.