Composer : Shri Gurugopaladasaru
ವರದಾ ಕಂಚಿ ವರದಾ |
ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದು
ನೆರೆವೆ,
ಬಂದು ನೆರೆವೆ ಅಭೀಷ್ಟವ ಗರೆವೆ | ಪ |
ನಿರುತ ನಿನ್ನಯ ಚರಣ ಶರಣರ
ಪೊರೆವ ಕಾರ್ಯ ಧುರಂಧರನೆ ಸಿರಿ | ಅ ಪ |
ಮಡುವಿನೊಳ್ ಮಕರಿ ಕಾಲ್ ಪಿಡಿದು ಸೆಳೆಯೆ ಜನ-
ಸರಿಯೆ,
ಜನ ಸರಿಯೆ ತುತಿಸಿ ನಿನ್ನ ಕರೆಯೆ,
ಮಡದಿಯೊಡನುಡಿ-ಯದಲೆ ಸಂಗಡ-
ಎಡ ಬಲದವರ ಕಡೆಗೆ ನೋಡದೆ,
ತಡೆಯದಲೆ ತಡಿಗೊದಗಿ ಕರಿಯ
ತೊಡರ ಬಿಡಿಸಿದೆ ಕಡು ದಯಾನಿಧೆ | ೧ |
ತೊಡೆಯಿಂದ ನಡೆಯೆಂದು ನುಡಿದು ಕೆಡಹೆ ಧ್ರುವ
ಮಿಡುಕೆ,
ಧ್ರುವ ಮಿಡುಕೆ, ಬಂದನು ನಿನ್ನ ಹುಡುಕೆ,
ಪೊಡವಿಯಡಿ-ಯಂಗುಟದ-ಲೊತ್ತುತ
ದೃಢ ವ್ರತದಿ ತಪ ಜಡಿದು ಮಾಡಲು,
ತಡೆಯದಲೆ ನೀನೊಲಿದು ಶೀಘ್ರದಿ
ಕೆಡದ ಪದವಿಯ-ನೊಡನೆ ನೀಡಿದೆ | ೨ |
ಕಡು ಬಾಧೆ ಬಡಿಸಿ ನಿನ್ನೊಡೆಯ-ನೆಲ್ಲಿಹನೆಂದು
ನುಡಿಯೆ,
ಎಂದು ನುಡಿಯೆ ಕಂಬವ ತೋರಿ ಜಡಿಯೆ,
ಸಿಡಿಲಿನಂದದಿ ಘುಡು ಘುಡಿಸಿ ಕೆಂ-
ಗಿಡಿಗಳ್-ಉಗುಳುತ ಹಿಡಿದು ಅಸುರನ,
ಕೆಡಹಿ ಬಗೆ ಬಗೆದೊಡಲ ಭಂಗಿಸಿ
ದೃಢ ಭಕುತನಂ ಗಡನೆ ಉಳುಹಿದೆ | ೩ |
ಮುಡಿ ಪಿಡಿದೆಳೆ ತಂದು ನಡು ಸಭೆಯಲಿ ಉಟ್ಟ
ಉಡುಗೆ,
ಉಟ್ಟ ಉಡುಗೆ ಸೆಳೆಯೆ ಬಾಲೆ ನಡುಗೆ,
ಒಡೆಯರೈವರ ದೃಢ ತಿಳಿದು ನಿ-
ನ್ನಡಿಗಳಿಗೆ ಮೊರೆಯಿಡಲು ಪಾರ್ಥನ,
ಮಡದಿಗ್-ಅಕ್ಷಯ ಉಡುಗೆ ತೊಡಿಸಿದ
ಬಡವ ಬಲ್ಲಿದರೊಡೆಯ ಮಾನದ | ೪ |
ಬಡತನದಲಿ ಭಂಗ ಬಡುತಲಿರಲು ವಿಪ್ರ-
ಮಡದಿ,
ವಿಪ್ರ ಮಡದಿ ಕಳುಹಲು ಬರೆ ದೃಢದಿ,
ಮಡದಿ ರುಗ್ಮಿಣಿ ಯೊಡನೆ ಪಾರ್ವನ
ಅಡಿಗಳಿಗೆ ಪೊಡ ಮಡುತ ತಂದೊ-
ಪ್ಪಿಡಿಯ ಅವಲಿಯ ಕೊಡಲು ಭುಂಜಿಸಿ,
ಕಡು ಸಂಪದವ ಸಂಗಡಲೆ ನೀಡಿದೆ | ೫ |
ಅಜಮಿಳ ವನದಲಂತ್ಯಜ ವಿವಸ್ತ್ರಳ ಕಂಡಂ-
ಗಜನ,
ಕಂಡಂಗಜನ ಬಾಣಕೆ ಸಿಲುಕಿ ಸ್ವಜನ,
ಯಜನ ಭಜನೆಯ ತ್ಯಜಿಸಿ ಕುಪ್ಪ್ರಜೆ,
ಸೃಜಿಸೆ ದ್ವಿಜನಿಗೆ ಕುಜರೆ ಬರೆ ಭಾ-
ನುಜನ ಪ್ರಜೆಗಳಿಗಂಜಿ ನಿಜ ಆ-
ತ್ಮಜನ ಕರೆಯಲು ದ್ವಿಜನ ಸಲಹಿದೆ | ೬ |
ಈ ಪರಿಯಲಿ ಬಲು ಆಪನ್ನ ಶರಣರ ಪೊರೆದೆ,
ಶರಣರ ಪೊರೆದೆ ಸುಕೀರ್ತಿಯ ಮೆರೆದೆ,
ಪಾಪಿ ನಾ ಬಲು ಎನ್ನ ಅವಗುಣ,
ರಾಪು ಮಾಡದೆ ನೀ ಪೊರೆಯೊ ಜಗದ್-
ವ್ಯಾಪಿ ಗುರುಗೋಪಾಲವಿಠಲ ದ-
ಯಾ ಪಯೋಭ್ಧಿ ಸುರಾಪಗಾಪಿತ | ೭ |
varadA kaMchi varadA |
varadA nI poreyeMdu kareyalAkShaNa baMdu
nereve,
baMdu nereve aBIShTava gareve | pa |
niruta ninnaya caraNa SaraNara
poreva kArya dhuraMdharane siri | a pa |
maDuvinoL makari kAl piDidu seLeye jana-
sariye,
jana sariye tutisi ninna kareye,
maDadiyoDanuDi-yadale saMgaDa-
eDa baladavara kaDege nODade,
taDeyadale taDigodagi kariya
toDara biDiside kaDu dayAnidhe | 1 |
toDeyiMda naDeyeMdu nuDidu keDahe dhruva
miDuke,
dhruva miDuke, baMdanu ninna huDuke,
poDaviyaDi-yaMguTada-lottuta
dRuDha vratadi tapa jaDidu mADalu,
taDeyadale nInolidu SIGradi
keDada padaviya-noDane nIDide | 2 |
kaDu bAdhe baDisi ninnoDeya-nellihaneMdu
nuDiye,
eMdu nuDiye kaMbava tOri jaDiye,
siDilinaMdadi GuDu GuDisi keM-
giDigaL-uguLuta hiDidu asurana,
keDahi bage bagedoDala BaMgisi
dRuDha BakutanaM gaDane uLuhide | 3 |
muDi piDideLe taMdu naDu saBeyali uTTa
uDuge,
uTTa uDuge seLeye bAle naDuge,
oDeyaraivara dRuDha tiLidu ni-
nnaDigaLige moreyiDalu pArthana,
maDadig-akShaya uDuge toDisida
baDava ballidaroDeya mAnada | 4 |
baDatanadali BaMga baDutaliralu vipra-
maDadi,
vipra maDadi kaLuhalu bare dRuDhadi,
maDadi rugmiNi yoDane pArvana
aDigaLige poDa maDuta taMdo-
ppiDiya avaliya koDalu BuMjisi,
kaDu saMpadava saMgaDale nIDide | 5 |
ajamiLa vanadalaMtyaja vivastraLa kaMDaM-
gajana,
kaMDaMgajana bANake siluki svajana,
yajana Bajaneya tyajisi kuppraje,
sRujise dvijanige kujare bare BA-
nujana prajegaLigaMji nija A-
tmajana kareyalu dvijana salahide | 6 |
I pariyali balu Apanna SaraNara porede,
SaraNara porede sukIrtiya merede,
pApi nA balu enna avaguNa,
rApu mADade nI poreyo jagad-
vyApi gurugOpAlaviThala da-
yA payOBdhi surApagApita | 7 |

Leave a Reply
You must be logged in to post a comment.