Bhuvanadolagene

Composer : Shri Gopaladasaru on Shri Adya Krishnadvaipayanacharya

By Smt.Shubhalakshmi Rao

ಭುವನದೊಳಗೆಣೆಗಾಣೆ ನಿಮಗೆ |
ಕವಿರಾಜ ದ್ವಯಪಾಯನಾರ್ಯ ಅಗಣಿತ ಶೌರ್ಯ || ಪ ||

ಶಮೆಯಲ್ಲಿ ದಮೆಯಲ್ಲಿ ದ್ವಂದ್ವಗಳ ಸಹಿಪಲ್ಲಿ |
ಕುಮತಿಗಳ ಗೆಲುವಲ್ಲಿ ಕುಶಲ ಬುದ್ಧಿಯಲ್ಲಿ |
ಯಮನಿಯಮ ಅಷ್ಟಾಂಗ ಯೋಗ ಧಾರಣದಲ್ಲಿ |
ಕ್ಷಮೆಯಲ್ಲಿ ಅಹಂಕಾರ ಮಮಕಾರ ತ್ಯಾಗದಲ್ಲಿ || ೧ ||

ವೇದ ಶಾಸ್ತ್ರಾಭ್ಯಾಸ ಜ್ಞಾನ ಕರ್ಮಗಳಲ್ಲಿ |
ವಾದಿಗಳ ಮುರಿವಲ್ಲಿ ವರ ಕೊಡುವಲ್ಲಿ |
ಭೂ ದೇವತೆಗಳಲ್ಲಿ ಭಕ್ತಿ ದಾತೃತ್ವದಲ್ಲಿ |
ಸಾಧು ಸಮ್ಮತ ಸಕಲ ಸಂಪದಗಳಲ್ಲಿ || ೨ ||

ವರದರಾಜಾನುಜ ಹಯಗ್ರೀವ ಪದಾಶ್ರಯರೆ |
ಪರಮ ವೈಷ್ಣವರೆ ಅಧ್ಯಾತ್ಮ ನಿಪುಣ |
ನರರೆಂದು ನಿಮ್ಮ ತಿಳಿದವನೆ ನರಕಕೆ ಯೋಗ್ಯ |
ಕರುಣಿ ಗೋಪಾಲ ವಿಠಲನ್ನ ದಾಸೋತ್ತಮನೆ || ೩ ||


BuvanadoLageNegANe nimage |
kavirAja dvayapAyanArya agaNita Saurya || pa ||

Sameyalli dameyalli dvaMdvagaLa sahipalli |
kumatigaLa geluvalli kuSala buddhiyalli |
yamaniyama aShTAMga yOga dhAraNadalli |
kShameyalli ahaMkAra mamakAra tyAgadalli || 1 ||

vEda SAstrAByAsa j~jAna karmagaLalli |
vAdigaLa murivalli vara koDuvalli |
BU dEvategaLalli Bakti dAtRutvadalli |
sAdhu sammata sakala saMpadagaLalli || 2 ||

varadarAjAnuja hayagrIva padASrayare |
parama vaiShNavare adhyAtma nipuNa |
narareMdu nimma tiLidavane narakake yOgya |
karuNi gOpAla viThalanna dAsOttamane || 3 ||

Leave a Reply

You might also like

error: Content is protected !!