Composer : Shri Vishwendra Teertharu
ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆ
ನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು [ಪ]
ಮೀನಾಗಿ ಜಲದೊಳು ತಿರುಗುವದ್ಯಾಕೊ
ಜಾಣನೆಂದೆನಿಸಿ ಭಾರವ ಪೊತ್ತುದ್ಯಾಕೊ (೧)
ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋ
ಕಂದನ ಪೊರೆಯೆ ಕಂಬದಿ ತೋರಿದ್ಯಾಕೊ (೨)
ವಟುವಾಗಿ ಭೂಮಿಯ ಬೇಡಿದೆ ಏತಕೊ
ಹಟವು ರಾಯರ ಮೇಲೆ ನಿನಗ್ಯಾಕೆ ಬೇಕೋ (೩)
ಮಲತಾಯಿ ನುಡಿಗಾಗಿ ವನವಾಸ ನಿನಗ್ಯಾಕೊ
ಬಲದಿ ತಂದೆಯ ಬಂಧ ಬಿಡಿಸಿದ್ದು ಸಾಕೊ (೪)
ರಾಜೇಶ ಹಯಮುಖ ಬತ್ತಲೆ ನಿಂತೆ ಏಕೊ
ತೇಜಿಯನೇರ್ದು ತೋರುವ ಶೌರ್ಯ ಸಾಕೊ (೫)
nAnA vEShagaLinnu ninagyAko hariye
ninna Baktaru ninna tiLiyade biDaru [pa]
mInAgi jaladoLu tiruguvadyAko
jANaneMdenisi BArava pottudyAko (1)
haMdyAgi ditijana baDide nInyAtakO
kaMdana poreye kaMbadi tOridyAko (2)
vaTuvAgi BUmiya bEDide Etako
haTavu rAyara mEle ninagyAke bEkO (3)
malatAyi nuDigAgi vanavAsa ninagyAko
baladi taMdeya baMdha biDisiddu sAko (4)
rAjESa hayamuKa battale niMte Eko
tEjiyanErdu tOruva Saurya sAko (5)

Leave a Reply
You must be logged in to post a comment.