Composer: Shri Muddu vittala
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಜಯ ಮಹಾ ಪತಿ ವ್ರತಾ ಅರುಂಧತಿ ದೇವಿಗೆ
ಜಯ ಸಪ್ತ ಋಷಿಗಳಿಗೆ |
ಕಶ್ಯಪ ಅತ್ರಿ ಭಾರಧ್ವಾಜ ಗೌತಮ ವಶಿಶ್ಠ
ವಿಶ್ವಾಮಿತ್ರ ಜಮದಗ್ನಿಗೆ |
ಅರ್ಥಿಯಿಂದಲಿ ಕುಳಿತ ಅರುಂಧತಿ ದೇವಿಗೆ
ಅಚ್ಚುಮೆಚ್ಚಿನ ಆರತಿ ಎತ್ತಿರೆ [೧]
ನಿತ್ಯ ಸ್ಮರಿಸಿದರೆ ಬ್ರಹ್ಮ ಹತ್ಯ ದೋಷ ಓಡೋದು,
ಭಕ್ತಿಯಿಂದ ಪೂಜಿಸಲು ಇಷ್ಟಾರ್ಥ ಸಿದ್ಧಿ,
ನಕ್ಷತ್ರ ಮಂಡಲದಿ ಥಳ ಥಳನೆ ಹೊಳೆಯುತಲಿ,
ಮುಕ್ತಿ ಮಾರ್ಗವ ನಿತ್ಯ ತೋರುತಾಲಿಹರು [೨]
ಎಷ್ಟು ವರ್ನಿಸಲವ ಮಹಿಮ ಕರುಣವ
ಸಂತುಷ್ಟದಿಂದ ಬ್ರಹ್ಮ ಕುಲವ ಪಾಲಿಪರು,
ದಿಟ್ಟ ಮೂರುತಿ ನಮ್ಮ ಮುದ್ದು ವಿಠ್ಠಲನಘ್ರಿ
ಭಕ್ತಿ ಭಾವವನಿತ್ತು ಭವ ದಾಟಿಸುವರು [೩]
jaya maMgaLaM nitya shubha maMgaLaM
jaya mahA pati vratA aruMdhati dEvige
jaya sapta RuShigaLige |
kashyapa atri bhAradhvAja gautama vashishTha
vishwAmitra jamadagnige |
arthiyiMdali kuLita aruMdhati dEvige
acchumeccina Arati ettire [1]
nitya smarisidare brahma hatya dOSha ODOdu,
bhaktiyiMda pUjisalu iShTArtha siddhi,
nakShatra maMDaladi thaLa thaLane hoLeyutali,
mukti mArgava nitya tOrutAliharu [2]
eShTu varnisalava mahima karuNava
saMtuShTadiMda brahma kulava pAliparu,
diTTa mUruti namma muddu viThThalanaghri
bhakti bhAvavanittu bhava dATisuvaru [3]

Leave a Reply
You must be logged in to post a comment.