Anganamani tangi keli

Composer : Shri Pranapati vittala [Shri Shatpuracharya]

By Smt.Shubhalakshmi Rao

ಅಂಗನಾಮಣಿ ತಂಗಿ ಕೇಳಿ, ಮಹಾತ್ಮರ |
ಮಂಗಳಮಹಿಮೆ || ಪ||

ಪೊಂದಿದವರ ಹೃದಯಾಂಧಕಾರಕೆ,
ಶರ-ಶ್ಚಂದ್ರರೋ, ಗುಣಸಾಂದ್ರರೋ, ಸಖಿ ||೧||

ಭಕ್ತಿ ಬೋಧಾನ್ಯ ವಿರಕ್ತಿ ಮುಖ ಸುಗುಣ-
ಯುಕ್ತರೋ, ಜೀವನ್ಮುಕ್ತರೋ, ಸಖಿ ||೨||

ಗುರು ವಾದಿರಾಜ ಮತ್ಸರಿ ದುರುಳರ ಗೆದ್ದು
ಮೆರೆದರೋ, ತತ್ವ ಸುರಿದರೋ, ಸಖಿ ||೩||

ಪಂಡಿತವರ ಜಂಬುಖಂಡಿ ಪಾದ ದ್ವಯೋ-
ದಂಡರೋ, ಖಳರಿಗೆ ಚಂಡರೋ, ಸಖಿ ||೪||

ದಿಟ್ಟ ಶ್ರೀ ಪ್ರಾಣಪತಿ ವಿಠಲ ಗುಣಗಣ-
ನಿಷ್ಠರೋ, ಸುಜನ ಶ್ರೇಷ್ಠರೋ, ಸಖಿ ||೫||


aMganAmaNi taMgi kELi, mahAtmara |
maMgaLamahime || pa||

poMdidavara hRudayAMdhakArake,
Sara-ScaMdrarO, guNasAMdrarO, saKi ||1||

Bakti bOdhAnya virakti muKa suguNa-
yuktarO, jIvanmuktarO, saKi ||2||

guru vAdirAja matsari duruLara geddu
meredarO, tatva suridarO, saKi ||3||

paMDitavara jaMbuKaMDi pAda dvayO-
daMDarO, KaLarige caMDarO, saKi ||4||

diTTa SrI prANapati viThala guNagaNa-
niShTharO, sujana SrEShTharO, saKi ||5||

Leave a Reply

You might also like

error: Content is protected !!