Bharateeshanige namo

Composer : Shri Varadendra vittala [ Shishyaru of Shri Gurujagannatha dasaru]

By Smt.Shubhalakshmi Rao

ಭಾರತೀಶನಿಗೆ ನಮೋ ನಮೋ | ನಮ್ಮ
ಭಾರವ ಪೊತ್ತಗೆ ನಮೋ ನಮೋ ||ಪ||
ಚಾರುಚರಿತ ಶ್ರೀ ರಾಮ ನಾಮವ
ಸಾರುವ ಭಕುತಗೇ ನಮೊ ನಮೊ ||ಅ.ಪ||

ಅಂಜನಿ ಪುತ್ರಗೆ ನಮೋ ನಮೋ |
ಮಂಜುಳ ಗಾತ್ರಗೆ ನಮೋ ನಮೋ |
ಕಂಜಾಕ್ಷಿಯ ಪದಕಂಜಕೆರಗಿ ವನ
ಭಂಜಕ ಹನುಮಗೆ ನಮೋ ನಮೋ ||೧||

ಕುಂತಿ ಆತ್ಮಜಗೆ ನಮೋ ನಮೋ |
ಸಂತರ ಪ್ರೀಯಗೆ ನಮೋ ನಮೋ |
ಹಂತ ಕೌರವರ ಅಂತ ಕರ್ತ
ಬಲವಂತ ಭೀಮನಿಗೆ ನಮೋ ನಮೋ ||೨||

ಮಧ್ಯಗೇಹಜನಿಗೆ ನಮೋ ನಮೋ |
ಮುದ್ದು ಮುನಿವರನಿಗೆ ನಮೋ ನಮೋ |
ಅದ್ವೈತ ಶಾಸ್ತ್ರವಾ ಪದ್ದಗೈದ ಗುರು
ಮಧ್ವರಾಯರಿಗೆ ನಮೋ ನಮೋ ||೩||

ಲೋಕ ಪೂಜ್ಯನಿಗೆ ನಮೋ ನಮೋ |
ಭೀಕರ ರೂಪಗೆ ನಮೋ ನಮೋ |
ಏಕವಿಂಶತಿ ಕುಭಾಷ್ಯವ ಖಂಡಿಸಿ
ಶೇಖರ ಮಾಡ್-ದಗೆ ನಮೋ ನಮೋ ||೪||

ಹರಿಯ ರೂಪನಿಗೆ ನಮೋ ನಮೋ |
ದುರುಳ ಶಿಕ್ಷಕಗೆ ನಮೋ ನಮೋ |
ವರದೇಂದ್ರವಿಠಲನ ಧ್ಯಾನವ ಮಾಡುವ
ಹರುಷತೀರ್ಥರಿಗೆ ನಮೋ ನಮೋ ||೫||


BAratISanige namO namO | namma
BArava pottage namO namO ||pa||
cArucarita SrI rAma nAmava
sAruva BakutagE namo namo ||a.pa||

aMjani putrage namO namO |
maMjuLa gAtrage namO namO |
kaMjAkShiya padakaMjakeragi vana
BaMjaka hanumage namO namO ||1||

kuMti Atmajage namO namO |
saMtara prIyage namO namO |
haMta kauravara aMta karta
balavaMta BImanige namO namO ||2||

madhyagEhajanige namO namO |
muddu munivaranige namO namO |
advaita SAstravA paddagaida guru
madhvarAyarige namO namO ||3||

lOka pUjyanige namO namO |
BIkara rUpage namO namO |
EkaviMSati kuBAShyava KaMDisi
SEkhara maaD-dage namO namO ||4||

hariya rUpanige namO namO |
duruLa SikShakage namO namO |
varadEMdraviThalana dhyAnava mADuva
haruShatIrtharige namO namO ||5||

Leave a Reply

You might also like

error: Content is protected !!