Select script   
Aksharamukha

Bhuvaraha Suladi – Vijayadasaru

Smt.Nandini Sripad

ಧ್ರುವತಾಳ
ಭೂವರಹ ಅವತಾರ ಶೃಂಗಾರ ಗುಣಾಕಾರ
ದೇವರ ದೇವನೆ ಧಾರುಣಿಧರಾ ದಾ –
ನವರ ವಿಪಿನ ಕುಠಾರ ಕಲುಷಹರಾ
ಸ್ಥಾವರ ಜಂಗಮ ಜಠರದೊಳಗೆ ಯಿಟ್ಟ
ಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತ
ಜೀವರಾಖಿಳರಿಗೆ ಬಲುಭಿನ್ನ ದಯ ಪಾ –
ರಾವರ ಮೂರುತಿ ಸುರನರೋರಗ ಪಾ –
ರಾವರ ವಿನುತಾ ವಿನುತಜ ಗಮನಾ ಕ್ಷೀರ –
ವಾರಿಧಿ ಶಯನಾ ವಾರಿಜನಯನಾ ಇಂ –
ದೀವರ ಶ್ಯಾಮ ಶ್ರೀವಿಜಯವಿಟ್ಠಲರೇಯಾ
ತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾ
ಭೂ ವರಹಾವತಾರಾ || ೧ ||

ಮಟ್ಟತಾಳ

ಸುರರನ ಬೆಂಬತ್ತಿ ಧರಣಿಯನು ಕಿತ್ತಿ
ಸುರಳಿಯ ಮಾಡಿ ಸುತ್ತಿ
ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ
ಧರಣಿಯ ನಿಜಪತ್ತಿ ವಿಜಯವಿಟ್ಠಲ ಮೂರ್ತಿ
ಮೆರೆದನು ಸತ್ಕೀರ್ತಿ ಧರಣಿಯ ನಿಜಪತ್ತಿ || ೨ ||

ರೂಪಕತಾಳ
ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು
ರಸಾತಳದೊಳಗೆ ಇರಿಸಿದಾನಂದೂ
ರಸಹೀನವಾಗೆ ನೀರಸರಾಗಿ ಪೋಗಿ ಸುಮ –
ನಸರು ಚಿಂತೆಯಲಿ ಕಾಣಿಸದೆ ಪುಣ್ಯ –
ಬಿಸಜಭವನೆಡೆಗೆ ಅಸುರರಿಪುಗಳು ಪೋಗಿ
ಪುಸಿಯದೆ ಬಿನ್ನೈಸೆ ವಸುಧಿಯಾ ಸ್ಥಿತಿಯಾ
ಪಶುಪತಿ ಪಿತ ತಿಳಿದು ವಿಜಯವಿಟ್ಠಲರೇಯಗೆ
ಹಸುಳೆಯಂದದಲಿ ಉಬ್ಬಸವ ಪೇಳಿದನು || ೩ ||

ಝಂಪೆತಾಳ
ಸೂಕರ ರೂಪವ ತಾಳಿ ಕೋರಿದಾಡಿಲಿಂದ
ಭೀಕರ ಶಬ್ಧದಿ ದಶದಿಶೆಗಳೆಲ್ಲ ಬೀರುತ್ತ
ಭೂಕಂಪಿಸುವಂತೆ ಘುಡಿಘುಡಿಸೆ ಘೋಷವ
ಲೋಕೇಶ ಮುಖ್ಯರು ಸುರರೆಲ್ಲ ಸುಖಬಡಲು
ಶೋಕವಾಯಿತು ದೈತ್ಯಾವಳಿಗೆ ವೇದಗಳು
ವಾಕು ತೊದಲನುಡಿ ಗದಗದನೆ ಕೊಂಡಾಡೆ
ವೈಕುಂಠಪತಿ ನಮ್ಮ ವಿಜಯವಿಟ್ಠಲನು ವಿ –
ವೇಕರನೊಡಗೂಡಿ ನೂಕಿದನು ಬಲವಾ || ೪ ||

ತ್ರಿಪುಟತಾಳ
ಇಳಿಯಾ ಬಗದು ರಸಾತಳಕೆ ನಿಲ್ಲದೆ ಪೋಗಿ
ಪೊಳೆವ ದಾಡಿಲಿಂದ ಖಳನ ಕುಕ್ಕಿರಿದೂ
ಕೊಲಹಾಲವೆಬ್ಬಿಸಿ ನೆಲಕೆ ಅಪ್ಪಳಿಸಿ
ಬಲು ಬಲವಂತ ನಾದವನಾ
ಅಳಿದು ಆ ಕ್ಷಣದಲ್ಲಿ ನೆಲಕೆ ಕೆಡಹಿ
ನೆಲನಾ ಪಲುದುದಿಯಲಿ ಪೊತ್ತು ಕಿಲಿ
ಕಿಲಿ ನಗುತಾಲಿಪ್ಪ ಹಲವು ಮಾತಿಲಿ
ಜಲಜನಾಭನೆ ನಮ್ಮ ವಿಜಯವಿಟ್ಠಲರೇಯಾ
ವೊಲವ ಕಿಟಿದೇವಾನೆ ಇಳಿಯ ಭಾರಹರಣಾ || ೫ ||

ಅಟ್ಟತಾಳ

ನಾರಾಯಣ ಕೃಷ್ಣ ಅಚ್ಯುತ ಗೋವಿಂದ
ನಾರದ ವರದ ಗೋವಿಂದಾನಂತಾ
ಶೌರಿ ಮುರಾರಿ ಮುಕುಂದ ಸದಾನಂದಾ
ಶ್ರೀರಮಣನೆ ಜ್ಞಾನಪುಂಜಾನೆ ಕುಂಜರ
ದಾರುಣ ದೈತ್ಯಾರಿ ಕಾರುಣ್ಯ ಮೂರುತಿ
ಈ ರೀತಿಯಲಿ ಸ್ತೋತ್ರ ಧಾರುಣಿದೇವಿ ಅ –
ಪಾರವಾಗಿ ಮಾಡೆ
ಮಾರಜನಕ ಹರಿ ವಿಜಯವಿಟ್ಠಲರೇಯಾ
ಗೀರವಾಣರ ಪ್ರತಿ ಸಾರವ ಹರಿಸಿದಾ || ೬ ||

ಆದಿತಾಳ
ದುಂದುಭಿ ಮೊರೆಯೆ ಮೇಲೆ ಮಂದರ ಮೊಗ್ಗೆ ಗರಿಯೆ
ಗಂಧರ್ವಾದಿಗಳು ನಾರಂದ ತುಂಬರಾರು ನಿಂದು
ವಂದಾಗಿ ಪಾಡುತ್ತ ನಂದಾದಿಂದ ನಲಿದಾಡೆ
ಇಂದುವಿನೊಳು ಕಳಂಕ ಪೊಂದಿದಂತೆ ದಾಡೆ ತುದಿಗೆ
ಸುಂದರ ವಸುಂಧರವು ಛಂದದಿಂದ ವೊಪ್ಪುತಿರೆ
ಮಂದಾಕಿನಿಜನಕ ವಿಜಯವಿಟ್ಠಲ ಉರ –
ಗೇಂದ್ರಗಿರಿಯಲ್ಲಿ ಬಂದು ನಿಂದ ನಿಗಮಗೋಚರ || ೭ ||

ಜತೆ
ಸ್ವಾಮಿಪುಷ್ಕರಣಿಯವಾಸಿ ಕ್ರೋಡವೇಷಾ
ಭೂಮಿರಮಣ ನಮ್ಮ ವಿಜಯವಿಟ್ಠಲ ತಿಮ್ಮಾ ||


dhruvatALa
BUvaraha avatAra SRuMgAra guNAkAra
dEvara dEvane dhAruNidharA dA –
navara vipina kuThAra kaluShaharA
sthAvara jaMgama jaTharadoLage yiTTa
SrIvara sarvasAraBOkta SrImadAnaMta
jIvarAKiLarige baluBinna daya pA –
rAvara mUruti suranarOraga pA –
rAvara vinutA vinutaja gamanA kShIra –
vAridhi SayanA vArijanayanA iM –
dIvara SyAma SrIvijayaviTThalarEyA
tAvare jaladoLagiddaMtennoLagippA
BU varahAvatArA || 1 ||

maTTatALa

surarana beMbatti dharaNiyanu kitti
suraLiya mADi sutti
BaradiMdali etti irisida durmatti
dharaNiya nijapatti vijayaviTThala mUrti
meredanu satkIrti dharaNiya nijapatti || 2 ||

rUpakatALa
asura kanakAkShanu vasudhiyA eLedoydu
rasAtaLadoLage irisidAnaMdU
rasahInavAge nIrasarAgi pOgi suma –
nasaru ciMteyali kANisade puNya –
bisajaBavaneDege asuraripugaLu pOgi
pusiyade binnaise vasudhiyA sthitiyA
paSupati pita tiLidu vijayaviTThalarEyage
hasuLeyaMdadali ubbasava pELidanu || 3 ||

JaMpetALa
sUkara rUpava tALi kOridADiliMda
BIkara Sabdhadi daSadiSegaLella bIrutta
BUkaMpisuvaMte GuDiGuDise GOShava
lOkESa muKyaru surarella suKabaDalu
SOkavAyitu daityAvaLige vEdagaLu
vAku todalanuDi gadagadane koMDADe
vaikuMThapati namma vijayaviTThalanu vi –
vEkaranoDagUDi nUkidanu balavA || 4 ||

tripuTatALa
iLiyA bagadu rasAtaLake nillade pOgi
poLeva dADiliMda KaLana kukkiridU
kolahAlavebbisi nelake appaLisi
balu balavaMta nAdavanA
aLidu A kShaNadalli nelake keDahi
nelanA palududiyali pottu kili
kili nagutAlippa halavu mAtili
jalajanABane namma vijayaviTThalarEyA
volava kiTidEvAne iLiya BAraharaNA || 5 ||

aTTatALa

nArAyaNa kRuShNa acyuta gOviMda
nArada varada gOviMdAnaMtA
Sauri murAri mukuMda sadAnaMdA
SrIramaNane j~jAnapuMjAne kuMjara
dAruNa daityAri kAruNya mUruti
I rItiyali stOtra dhAruNidEvi a –
pAravAgi mADe
mArajanaka hari vijayaviTThalarEyA
gIravANara prati sArava harisidA || 6 ||

AditALa
duMduBi moreye mEle maMdara mogge gariye
gaMdharvAdigaLu nAraMda tuMbarAru niMdu
vaMdAgi pADutta naMdAdiMda nalidADe
iMduvinoLu kaLaMka poMdidaMte dADe tudige
suMdara vasuMdharavu CaMdadiMda vopputire
maMdAkinijanaka vijayaviTThala ura –
gEMdragiriyalli baMdu niMda nigamagOcara || 7 ||

jate
svAmipuShkaraNiyavAsi krODavEShA
BUmiramaNa namma vijayaviTThala timmA ||

Leave a Reply

error: Content is protected !!