Eccarikeccarike

Composer : Shri Vadirajaru

By Smt.Shubhalakshmi Rao

ಎಚ್ಚರಿಕೆಚ್ಚರಿಕೆ [ಪ]
ನಿಶ್ಚಿಂತೆಯಲಿ ಹರಿಯ ಧ್ಯಾನವ ಮಾಡುವುದಕ್ಕೆ [ಅ.ಪ]

ಅಜನು ತೊಳೆದು ಅರ್ಚಿಸುವ ಶ್ರೀಪಾದಕ್ಕೆ ಎಚ್ಚರಿಕೆ
ಧ್ವಜ ವಜ್ರರೇಖೆಯಿಂದೊಪ್ಪುವ ಪಾದಕ್ಕೆ ಎಚ್ಚರಿಕೆ
ವ್ರಜದ ಗೋಪಿಯರು ಭಜಿಸುವ ಪಾದಕ್ಕೆ ಎಚ್ಚರಿಕೆ
ಸುಜನರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ [೧]

ಸುರರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ
ಸರಸಿಜಾಕ್ಷಿ ಸವಿದೊತ್ತುವ ಪಾದಕ್ಕೆ ಎಚ್ಚರಿಕೆ
ಗರುಡನೇರಿ ಮೆರೆವ ಗಂಭೀರ ಪಾದಕ್ಕೆ ಎಚ್ಚರಿಕೆ
ಉರಗನ ಮೇಲೆ ಓಡ್ಯಾಡಿದ ಪಾದಕ್ಕೆ ಎಚ್ಚರಿಕೆ [೨]

ಲಲನೆಯರ ಸ್ತನದಲ್ಲಿ ಕುಣಿದಂಥ ಪಾದಕ್ಕೆ ಎಚ್ಚರಿಕೆ
ಜಲಜಾಸನ ಬಂದು ವಂದಿಪ ಪಾದಕ್ಕೆ ಎಚ್ಚರಿಕೆ
ಶಿಲೆಯ ಸ್ತ್ರೀಯಳ ಮಾಡಿದ ಶೃಂಗಾರ ಪಾದಕ್ಕೆ ಎಚ್ಚರಿಕೆ
ಚೆಲುವ ಹಯವದನನ ಚರಣಾರವಿಂದಕ್ಕೆ ಎಚ್ಚರಿಕೆ [೩]


eccarikeccarike [pa]
niSciMteyali hariya dhyAnava mADuvudakke [a.pa]

ajanu toLedu arcisuva SrIpAdakke eccarike
dhvaja vajrarEKeyiMdoppuva pAdakke eccarike
vrajada gOpiyaru Bajisuva pAdakke eccarike
sujanarellaru baMdu eraguva pAdakke eccarike [1]

surarellaru baMdu eraguva pAdakke eccarike
sarasijAkShi savidottuva pAdakke eccarike
garuDanEri mereva gaMBIra pAdakke eccarike
uragana mEle ODyADida pAdakke eccarike [2]

lalaneyara stanadalli kuNidaMtha pAdakke eccarike
jalajAsana baMdu vaMdipa pAdakke eccarike
Sileya strIyaLa mADida SRuMgAra pAdakke eccarike
celuva hayavadanana caraNAraviMdakke eccarike [3]

Leave a Reply

Your email address will not be published. Required fields are marked *

You might also like

error: Content is protected !!