Shobhana kama janakanige

Composer : Shri Pranesha dasaru

By Smt.Shubhalakshmi Rao

ಕಂಕಣ ಕಟ್ಟುವ ಪದ

ಶೋಭಾನ ಕಾಮಜನಕನಿಗೆ |
ಶೋಭನ ಶ್ರೀ ಮಹಾ ಲಕುಮಿಗೆ |
ಶೋಭಾನವೆನ್ನೀ ಬುಧರೆಲ್ಲಾ [ಪ]

ಪಾಲ ಸಮುದ್ರವು ಹೆಣ್ಣಿನ ಮನೀ |
ಮೇಲಾದ ದ್ವಾರಕಿ ಗಂಡಿನ ಮನಿ |
ಮೂಲೋಕದೊಳಗಿಹ ನಿಬ್ಬಣದವರೋಲಯ
ಒದಗೀದಾರು ಶೋಭಾನ [೧]

ಅಂಬರ ಛಪ್ಪರ ರವಿಚಂದ್ರರು |
ಸಂಭ್ರಮ ತೋರಣಗಳು ಮದುವೀಗೆ |
ಇಂಬಾದ ಮೇದಿನಿ ಪರದಿಯ ಶ್ಯಾಲಿ |
ಹೊಂಬಣ್ಣನ ಗಿರಿಜಗುಲೀ ಶೋಭಾನ [೨]

ಆ ಮಹಾ ಸುರರಂಗನಿಯರು ಬಹಳಾ |
ಮುದದಲಿ ಪ್ರಾಣೇಶ ವಿಠ್ಠಲಗೆ |
ಶ್ರೀ ಮಾಯಾದೇವಿಗೆ ಕಂಕಣ |
ನೇಮಿಸಿ ಕಟ್ಟಿದರೂ ಶೋಭಾನ [೩]


kaMkaNa kaTTuva pada

SOBAna kAmajanakanige |
SOBana SrI mahA lakumige |
SOBAnavennI budharellA [pa]

pAla samudravu heNNina manI |
mElAda dvAraki gaMDina mani |
mUlOkadoLagiha nibbaNadavarOlaya
odagIdAru SOBAna [1]

aMbara Cappara ravicaMdraru |
saMBrama tOraNagaLu maduvIge |
iMbAda mEdini paradiya SyAli |
hoMbaNNana girijagulI SOBAna [2]

A mahA suraraMganiyaru bahaLA |
mudadali prANESa viThThalage |
SrI mAyAdEvige kaMkaNa |
nEmisi kaTTidarU SOBAna [3]

Leave a Reply

Your email address will not be published. Required fields are marked *

You might also like

error: Content is protected !!