Composer: Shri Abhinava Janardana Vittala
ಜಯ ಜಯ ಶ್ರೀ ವಾದಿರಾಜ || ಪ ||
ಜಯ ಜಯ ಆಶ್ರಿತ ಕಲ್ಪ ಭೂಜ || ಅ.ಪ ||
ದಂಡ ಕಮಂಡಲ ಕರದವನೆ ಭೂ-
ಮಂಡಲದೊಳು ಬಹು ಮೆರೆದವನೆ ಉ-
ದಂಡ ಖಳರ ಮತ ಮುರಿದವನೆ ಚೆಲ್ವ
ಪುಂಡರೀಕ ನಯನನ ತೋರ್ದವನೇ || ೧ ||
ಭವಭಯ ಮದವನೆ ಮಣಿಸಿದನೆ ಶುದ್ಧ
ಸುವಿವೇಕ ಶಿರೋಮಣಿ ಎನಿಸಿದನೆ, ನಮ್ಮ
ಅವನಿಪ ಹಯಾಸ್ಯನ ಭಜಿಸುವನೆ ಎ-
ನ್ನವಗುಣಗಳ ದೂರ ನಿಲಿಸಿದನೇ || ೨ ||
ಕವಿ ಜನರಿಗೆ ಸುಖ ಸುರಿಸಿದನೆ ನಿ-
ನ್ನವರವ-ನೆಂದೆನಿಸಿದನೆ ಅಭಿ-
ನವಜನಾರ್ದನ ವಿಠಲನ ಒಲಿಸಿದನೆ, ಮನ-
ಕವಿ ಹಿತರನ ದೂರ ನಿಲಿಸಿದನೇ || ೩ ||
jaya jaya SrI vAdirAja || PA ||
jaya jaya ASrita kalpa BUja || A PA ||
daMDa kamaMDala karadavane BU-
maMDaladoLu bahu meredavane u-
daMDa KaLara mata muridavane celva
puMDarIka nayanana tOrdavanE || 1 ||
BavaBaya madavane maNisidane Suddha
suvivEka SirOmaNi enisidane, namma
avanipa hayAsyana Bajisuvane e-
nnavaguNagaLa dUra nilisidanE || 2 ||
kavi janarige suKa surisidane ni-
nnavarava-neMdenisidane aBi-
navajanArdana viThalana olisidane, mana-
kavi hitarana dUra nilisidanE || 3 ||
Leave a Reply