nadumane yolagondu

Composer: Shri Purandara dasaru

Expln by Shri Kesava Rao Tadipatri

ನಡುಮನೆಯೊಳಗೊಂದು ನಾಲ್ಕು ತೆಂಗಿನಮರ –
ಹೇ ಗಿಣಿ – ಹೇ ಗಿಣಿಯೇ ||
ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯಿತು – ಹೇ ಗಿಣಿ ||

ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ – ಹೇ ಗಿಣಿ
ತಲೆಯಿಲ್ಲದವ ಬಂದು ಹೊತ್ತು ಕೊಂಡುಹೋದ – ಹೇ ಗಿಣಿ ||೧||

ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ – ಹೇ ಗಿಣಿ
ಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ – ಹೇ ಗಿಣಿ ||೨||

ಬಲೆಯ ಹಾಕಿದರು ಬಲೆಯದಾಟುವದಯ್ಯ – ಹೇ ಗಿಣಿ
ಚೆಲುವ ಪುರಂದರವಿಠಲನೇ ಬಲ್ಲ – ಹೇ ಗಿಣಿ ||೩||


naDumaneyoLagoMdu nAlku teMginamara –
hE giNi – hE giNiyE ||
kaDemodalillade adu kAtu haNNAyitu – hE giNi ||

kAlilladava hatti kaiyilladava koyda – hE giNi
taleyilladava baMdu hottu koMDuhOda – hE giNi ||1||

kaNNilladava nODi keMpina haNNeMda – hE giNi
bAyilladava nuMgi basiroLagiMbiTTa – hE giNi ||2||

baleya hAkidaru baleyadATuvadayya – hE giNi
celuva puraMdaraviThalanE balla – hE giNi ||3||

Leave a Reply

Your email address will not be published. Required fields are marked *

You might also like

error: Content is protected !!