Composer : Shri Varadagopala vittala
ಮಾತೇ ಮಂತ್ರಗಳಾದವೆ ಗುರುವೆ ನಿಮ್ಮ |
ಪ್ರೀತಿಯಿಂದಾ ಯನಗೆ ಪೇಳಿದಾ ನಿಜವಾದ | ಪ |
ಅನುಜಾ ಬಾರೊ ಎಂದು ಅನುರಾಗದಲಿ ಕರದು |
ವಿನಯಾ ನುಡಿಗಳಿಂದಾ ಅನಘಾ ಪೇಳಿದ ದಿವ್ಯಾ || ೧ ||
ರಾಜಾಧಿರಾಜಾ ಮಹಾರಾಜಾ ಯನಗೆ ನೀ |
ರಾಜೀತ ರಾಜ ಯೋಗವನು ಪೇಳುವೆನೆಂದಾ || ೨ ||
ನಿತ್ಯವಲ್ಲವೋ ದೇಹ ಮರ್ತ್ಯ ಲೋಕವು ಇದು |
ಸತ್ಯ ಸಂಕಲ್ಪನ್ನ ಚಿತ್ತ ಹೀಗದೆಯಂದಾ || ೩ ||
ಯಂದೆಂದು ಯಮ್ಮನು ಪೊಂದೀದವನು ನೀನು |
ಹಿಂದೆ ಮುಂದಾದರೇನೊ ಬಂದು ಕೂಡುವಿಯಂದಾ || ೪ ||
ಯನ್ನಂತೆ ಸಾಕುವರಿನ್ನಾರೊ ತರುಳಾನೆ |
ಇನ್ನೇನ್ ಮಾಡಲಿ ಸ್ವಾಮಿ ನಿನ್ನ ರಕ್ಷಿಸಲೆಂದಾ || ೫ ||
ವಂದೆ ಮಾತಿದು ಶ್ರೀಗೋವಿಂದ ನಮ್ಮನು ತಾನೆ |
ಮುಂದಕ್ಕೆ ತಂದಾ ಇನ್ನೊಂದರಿಯೆವೊ ಯಂದಾ || ೬||
ಯನ್ನ ಸ್ವಾಮಿಯ ಮಹಿಮೆ ಇನ್ನು ನೂರೊರುಷವೊ |
ಅನ್ನಂತರದಿ ವಬ್ಬ ಘನ್ನ ಪುಟ್ಟುವನೆಂದಾ || ೭ ||
ಯನ್ನ ವಂಶದಿ ಪದಗಳಿನ್ನೂ ಪೇಳುವರು |
ಚನ್ನ ಗೋಪಾಲವಿಠಲನ್ನ ಭಜಿಸಿರೆಂದಾ || ೮ ||
ಪರಮ ಕರುಣಿ ನಮ್ಮ ಗುರು ವಚನಗಳಾನು
ಸ್ಮರಿಸಾಲು | ವರದಗೋಪಾಲವಿಠ್ಠಲ ವಲಿವಾ || ೯ ||
mAtE maMtragaLAdave guruve nimma |
prItiyiMdA yanage pELidA nijavAda | pa |
anujA bAro eMdu anurAgadali karadu |
vinayA nuDigaLiMdA anaGA pELida divyA || 1 ||
rAjAdhirAjA mahArAjA yanage nI |
rAjIta rAja yOgavanu pELuveneMdA || 2 ||
nityavallavO dEha martya lOkavu idu |
satya saMkalpanna citta hIgadeyaMdA || 3 ||
yaMdeMdu yammanu poMdIdavanu nInu |
hiMde muMdAdarEno baMdu kUDuviyaMdA || 4 ||
yannaMte sAkuvarinnAro taruLAne |
innEn mADali svAmi ninna rakShisaleMdA || 5 ||
vaMde mAtidu SrIgOviMda nammanu tAne |
muMdakke taMdA innoMdariyevo yaMdA || 6||
yanna svAmiya mahime innu nUroruShavo |
annaMtaradi vabba Ganna puTTuvaneMdA || 7 ||
yanna vaMSadi padagaLinnU pELuvaru |
canna gOpAlaviThalanna BajisireMdA || 8 ||
parama karuNi namma guru vacanagaLAnu
smarisAlu | varadagOpAlaviThThala valivA || 9 ||
Leave a Reply