Dhooli Darshanam

Composer: Shri Purandara dasaru

Smt.Lakshmi

ಧೂಳಿ ದರ್ಶನಂ ದು:ಖ ನಾಶನಂ
ಶಿಖರ ದರ್ಶನಂ ಚಿಂತೆ ನಾಶನಂ
ಪಾದ ದರ್ಶನಂ ಪಾಪ ನಾಶನಂ
ನಾಭಿ ದರ್ಶನಂ ನರಕ ನಾಶನಂ
ಹೃದಯ ದರ್ಶನಂ ಹೃದ್-ರೋಗ ನಾಶನಂ
ಕಂಠ ದರ್ಶನಂ ವೈಕುಂಠ ಸಾಧನಂ |
ಮುಖ ದರ್ಶನಂ ಮುಕ್ತಿ ಸಾಧನಂ
ಕಿರೀಟ ದರ್ಶನಂ ಪುನರ್ಜನ್ಮ ನಾಶನಂ |
ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ ||

ಮಾತ ಚ ಕಮಲಾದೇವಿ ಪಿತಾದೇವೊ ಜನಾರ್ದನ |
ಬಾಂಧವ ವಿಷ್ಣು ಭಕ್ತಾಶ್ಚ
ಸ್ವದೇಷೊ ಭುವನತ್ರಯಂ |

ಭಾಗೀರಥೀ ಹುಟ್ಟಿದಂಥ ಪಾದ ಪದ್ಮವನ್ನು ಕಂಡೆ,
ಬ್ರಹ್ಮಾಂಡ ಧರಿಸಿದಂಥ ಉದರವನ್ನು ಕಂಡೆ,
ಶಂಖ ಚಕ್ರವನ್ನು ಕಂಡೆ,
ಗದಾ ಪದ್ಮವನ್ನು ಕಂಡೆ,
ಮುತ್ತಿನಾ ಹಾರವನ್ನು ಕಂಡೆ,
ಮುತ್ತಿನ ತೊಡುಗೆಯನ್ನು ಕಂಡೇ,
ಮುತ್ತಿನಾ ಗದ್ದುಗೆಯ ಮೇಲೆ
ರುಗ್ಮಿಣೀ ಸತ್ಯಭಾಮೆಯರು ಸಹಿತ,
ಶ್ರೀ ಕೃಷ್ಣ ದೇವರು ಕೂತದ್ದು ಕಂಡೇ,
ಸರಸ್ವತೀ ದೇವೀ, ಭಾರತೀ ದೇವೀ ಚಾಮರ ಹಕುವುದನ್ನು ಕಂಡೇ,
ಶ್ರೀದೇವಿ, ಭೂ ದೇವಿ ಪಾದ ವೊತ್ತುವದನ್ನು ಕಂಡೆ,
ಮುನಿಗಳು ಸ್ತೋತ್ರ ಮಾಡುವುದನ್ನು ಕಂಡೆ,
ಕಪಿಗಳು ವಾಲಗ ಊದುವದು ಕಂಡೆ,
ಮಧ್ವರಾಯರು ಪೂಜೆ ಮಾಡುವುದನ್ನು ಕಂಡೆ,
ಮುಖ್ಯಪ್ರಾಣ ದೇವರು ಕೈ ಮುಗಿದುಕೊಂಡು ನಿಂತದ್ದು ಕಂಡೆ,
ಕಂಡೆನಯ್ಯ ಶ್ರೀ ಪುರಂದರ ವಿಠ್ಠಲನ್ನ,
ಬನ್ದೆವಯ್ಯ ನಿಮ್ಮ ಯಾತ್ರೆಗಾಗಿ,
ನಿಂದೆವಯ್ಯ ನಿಮ್ಮ ಕ್ಷೇತ್ರದಲ್ಲಿ,
ಕುಳಿತೆವಯ್ಯ ನಿಮ್ಮ ರಂಗ ಮಂಟಪದಲ್ಲಿ,
ಪ್ರಾತ:ಕಾಲ, ಸಾಯಂಕಾಲ, ಮಾಡೀದಷ್ಟು ದಿವಸ
ಮಾಡಿದಂತಹುದು |

ಶ್ರೀ ಗುರು ಮಧ್ವಾಂತರ್ಗತ ಶ್ರೀ ಗೊಪಾಲಕೃಷ್ಣ ಪ್ರೀಯತಾಮ್ ವರದೊ ಬಹವ್ತು |
ಶ್ರೀ ಕೃಷ್ಣಾರ್ಪಣಮಸ್ತು |


dhooLi darshanaM du:kha nAshanaM
shikhara darshanaM chiMte nAshanaM
pAda darshanaM pApa nAshanaM
nAbhi darshanaM naraka nAshanaM
hRudaya darshanaM hRud-rOga nAshanaM
kaMTha darshanaM vaikuMTha sAdhanaM |
mukha darshanaM mukti sAdhanaM
kireeTa darshanaM punarjanma nAshanaM |
sarvAMga darshanaM sarva pApa nAshanaM ||

mAta cha kamalAdEvi pitAdEvo janArdana |
bAMdhava viShNu bhaktAshcha
svadESho bhuvanatrayaM |

bhAgeerathI huTTidaMtha pAda padmavannu kaMDe,
brahmAMDa dharisidaMtha udaravannu kaMDe,
shaMkha chakravannu kaMDe,
gadA padmavannu kaMDe,
muttinA hAravannu kaMDe,
muttina toDugeyannu kaMDE,
muttinA gaddugeya mEle
rugmiNI satyabhAmeyaru sahita,
shrI kRuShNa dEvaru kootaddu kaMDE,
saraswatI dEvI, bhAratI dEvI chAmara hakuvudannu kaMDE,
shrIdEvi, bhU dEvi pAda vottuvadannu kaMDe,
munigaLu stOtra mADuvudannu kaMDe,
kapigaLu vAlaga ooduvadu kaMDe,
madhwarAyaru pUje mADuvudannu kaMDe,
mukhyaprANa dEvaru kai mugidukoMDu niMtaddu kaMDe,
kaMDenayya shrI puraMdara viThThalanna,
bandevayya nimma yAtregAgi,
niMdevayya nimma kShEtradalli,
kuLitevayya nimma raMga maMTapadalli,
prAta:kAla, sAyaMkAla, mADIdaShTu divasa
mADidaMtahudu |

shrI guru madhvAMtargata shrI gopAlakRuShNa prIyatAm varado bahavtu |
shrI kRuShNArpaNamastu |

Leave a Reply

Your email address will not be published. Required fields are marked *

You might also like

error: Content is protected !!