Kangalige habbavayitayya

Composer : Shri Vyasarajaru on Shri Purandara dasaru

By Smt.Shubhalakshmi Rao

ಕಂಗಳಿಗೆ ಹಬ್ಬವಾಯಿತಯ್ಯ ಈ
ಮಂಗಳಾತ್ಮಕ ಪುರಂದರದಾಸರನು ಕಂಡು ||ಪ||

ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವು
ಸಕಲ ಸತ್ಕರ್ಮ ಸಾಧಿಸಿದ ಫಲವು
ಭಕುತಿಯಿಂ ಭಾಗೀರಥೀ ಮಜ್ಜನದ ಫಲವು
ರುಕುಮಿಣಿ ಪತಿಯ ಪದ ಭಕುತರನು ಕಂಡು ||೧||

ಇವರ ನರರೆಂದವರು ನರಕದಲಿ ಬೀಳುವರು
ಕವಿಜನರು ಒಪ್ಪಿ ಕೈ ಹೊಡೆದು ಹೇಳಿರಲು
ಅವನಿಯೊಳಗತಿ ದುರ್ಲಭವು ನಂದಗೋಪನ್ನ
ಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು |೨||

ಧನ್ಯನಾದೆನು ನಾನು ಮನುಜನ್ಮದಿ ಹುಟ್ಟಿ
ಮಾನ್ಯನಾದೆನು ಇನ್ನು ಈ ಜಗದೊಳಗೆ
ಪನ್ನಂಗಶಯನ ಶ್ರೀಕೃಷ್ಣನ್ನ ದಾಸರನು
ಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||೩||


kaMgaLige habbavAyitayya I
maMgaLAtmaka puraMdaradAsaranu kaMDu ||pa||

sakala tIrthakShEtra yAtre mADida Palavu
sakala satkarma sAdhisida Palavu
BakutiyiM BAgIrathI majjanada Palavu
rukumiNi patiya pada Bakutaranu kaMDu ||1||

ivara narareMdavaru narakadali bILuvaru
kavijanaru oppi kai hoDedu hELiralu
avaniyoLagati durlaBavu naMdagOpanna
kuvaraniddeDeya vaikuMThaveMbuvara kaMDu |2||

dhanyanAdenu nAnu manujanmadi huTTi
mAnyanAdenu innu I jagadoLage
pannaMgaSayana SrIkRuShNanna dAsaranu
cennAgi smarisi pAvannanAdeniMdu ||3||

Leave a Reply

Your email address will not be published. Required fields are marked *

You might also like

error: Content is protected !!