Dasare gatiyu namage

Composer : Shri Badarayana vittala

By Smt.Shubhalakshmi Rao

ದಾಸರೇ ಗತಿಯು ನಮಗೆ ಪುರಂದರ ದಾಸರೇ [ಪ]
ಕಾಸು ವೀಸವು ಬೇಡದಂಥ ಸಿರಿ ಪುರಂದರ [ಅ.ಪ]

ನದಿಗಳಿಗೆ ಜಲಧಿಗತಿ ನರರಿಗೆಲ್ಲರಸುಗತಿ
ಸುಧತಿಯರಿಗೆಲ್ಲಾ ನಿಜಪತಿಯೇ ಗತಿಯು
ಸದಾಕಾಲ ಶಿಷ್ಯರಿಗೆ ಗುರು ಚರಣಗಳೇ ಗತಿಯು
ಮುದದಿಂದ ಕರವೆತ್ತಿ ಕೂಗುವೆನು ಪುರಂದರ || ೧ ||

ತನಯರಿಗೆ ತಾಯಿ ಗತಿ ಸಸಿಗಳಿಗೆ ಮಳೆಯೆ ಗತಿ
ವನದ ಲತೆಗಳಿಗೆಲ್ಲ ತರುವೇ ಗತಿಯು ||
ಮನೆಗೆ ಬಂದ ಅತಿಥಿಗಳಿಗ್ ಅನ್ನದಾನವೇ ಗತಿಯು
ದಣಿದ್ ಹಕ್ಕಿಗಳಿಗೆ ಗಿಡ ಗೋಪುರವೇ ಗತಿಯು || ೨ ||

ರಾಮ ಕಪಿಗಳ ನಮ್ಮ ಹನುಮಪ್ಪ ಕಾಯ್ದಂತೆ
ಸ್ವಾಮಿ ಸಿರಿ ಬಾದರಾಯಣ ವಿಠ್ಠಲನ್ನ
ಶ್ರೀ ಮನೋಹರ ಚರಣ ಸೇವಕರನುದ್ಧರಿಪ
ಆ ಮಹಾ ನಾರದಾತ್ಮಕರಾದ ಪುರಂದರ || ೩ ||


dAsarE gatiyu namage puraMdara dAsarE [pa]
kAsu vIsavu bEDadaMtha siri puraMdara [a.pa]

nadigaLige jaladhigati nararigellarasugati
sudhatiyarigellA nijapatiyE gatiyu
sadAkAla SiShyarige guru caraNagaLE gatiyu
mudadiMda karavetti kUguvenu puraMdara || 1 ||

tanayarige tAyi gati sasigaLige maLeye gati
vanada lategaLigella taruvE gatiyu ||
manege baMda atithigaLig annadAnavE gatiyu
daNid hakkigaLige giDa gOpuravE gatiyu || 2 ||

rAma kapigaLa namma hanumappa kAydaMte
svAmi siri bAdarAyaNa viThThalanna
SrI manOhara caraNa sEvakaranuddharipa
A mahA nAradAtmakarAda puraMdara || 3 ||

Leave a Reply

Your email address will not be published. Required fields are marked *

You might also like

error: Content is protected !!