-
Turchigiriyallondu roopadi
Composer : Shri Prasannavenkata dasaru [on Tulasigeri Bheema] ತುರ್ಚಿಗಿರಿಯಲ್ಲೊಂದು ರೂಪದಿ ನಿಂದಾ |ಅಚ್ಯುತನ್ನ ಪರಮಾಪ್ತಾ ಹನುಮಂತಾ [ಪ] ಸ್ವೋಚಿತ ಕರ್ಮಗಳಾಚರಿಪಜ್ಞಗೆ |ಯೋಚಿತ ಫಲವನು ಬಾಚಿ ಕೊಡುತಲಿ [ಅ.ಪ] ದ್ವಂದ್ವಾತೀತಾನಂದಿತ ಸುಂದರ |ಸಿಂಧು ಬಂಧನನ ಬಂಧುರ ಭಕುತಾ |ಚೆಂದದಿ ಸುಂದರಿಗಾನಂದನ ಮನ |ಸಂದೇಶವನೆ ನೀಡಿ ಬಂದ ಧರನ [೧] ದ್ಯುಮಣಿತೇಜ ಭೂಮಂಡಲಕಸಮ |ಭೀಮನಾಗಿ ದಮನಿತರನು ಮಣಿಸಿದಕಾಮಿಸಿ ಭಾಮೆಯನಾಮಂತ್ರಿಸಿದಾ |ಕುಮತಿ ಕೀಚಕನ ಅಸುವ ದಮಿಸಿ ಈ [೨] ಕಲಿಬಲದಿಂ ಕಂಗಾಲಾಗುತ ನೆಲೆ |ಯಿಲ್ಲದಲೆಯುತಿಹ ವಲ್ಲರಿ ವರ್ಗವ |ಲಲಿತ…
