-
Tumbitu beladingalu
Composer : Shri Vyasarajaru ತುಂಬಿತು ಬೆಳದಿಂಗಳು ಈ ವನದೊಳುತುಂಬಿತು ಬೆಳದಿಂಗಳು [ಪ] ತುಂಬಿತು ಬೆಳದಿಂಗಳೀ ವನದೊಳಗೆಲ್ಲಅಂಬುಜನಾಭನು ಬಾರ ಕಾಣಕ್ಕ [ಅ.ಪ] ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ (೧) ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿವೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದಿ ರಂಗ ಬಾರ ಕಾಣಕ್ಕ (೨) ಕಾದ ನೀರು ಎಲ್ಲ ಆರಿ ಹೋಗುತಲಿದೆಕೊಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯ ಕೃಷ್ಣ ಬಾರ…
