Tag: Taaramma Srirangadhamana

  • Taramma Srirangadhamana

    Composer : Shri Helavanakatte Giriyamma ತಾರಮ್ಮ ಶ್ರೀ ರಂಗಧಾಮನ ತಂದುತೋರಮ್ಮ ಎನ್ನೊಳು ಪ್ರೇಮನ |ವಾರಿಜಸನ ಶತಕೋಟಿ ತೇಜ ಸುಮುಖತೋರಲೊಲ್ಲೆ ಹೊಂತಕಾರಿಯು ಸಾರಿ [ಪ] ವೃಂದಾವನದೊಳಗಾಡುವ ಶ್ರೀ-ಗಂಧವ ಮೈಯೊಳು ತೀಡುವ |ಚಂದದಿ ಕೊಳಲೂದಿ ಪಾಡುವ ನಮ್ಮಕಂದರ್ಪ ಜಲ ಕ್ರೀಡೆಯಾಡುವ |ನಂದನ ಕಂದ ಮುಕುಂದನ ಕಾಣದೆಒಂದು ನಿಮಿಷ ಯುಗವಾಗಿದೆ ಸಖಿಯೇ [೧] ಉಡುವ ಸೀರೆಯ ಸೆಳೆದೋಡುವ ದೊಡ್ಡಕಡಹದ ಮರವೇರಿ ನೋಡುವ |ಕೊಡಲೊಲ್ಲದೆ ಬಲು ಕಾಡುವ ಲಜ್ಜೆ-ಗೆಡಿಸಿ ಮಾನಿನಿಯರ ಕೂಡುವ |ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿಒಡೆಯನ ಕರತಾರೆ ಅಡಿಗೆರಗುವೆ [೨]…

error: Content is protected !!