-
Srihari Karuna Suladi – Sheshadasaru
Raga:Darbarikanada ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಕರುಣ ಸುಳಾದಿ( ಹರಿ ಪ್ರಸಾದ ಹರಿ ಕರುಣವೆ ಮುಖ್ಯ ,ಗರ್ವ ಮದ ಸರ್ವಥಾ ತಾಳಲಾಗದು.ಗರ್ವ ಮಾಡಿದುದಕೆ ಹರಿಯ ಕುರುಹು ಮರದೆ.ಇತ್ಯಾದಿ ಪೂರ್ವಜನುಮ ಐತಿಹಾಸಿಕ ಪ್ರಾರ್ಥನಾ.)ರಾಗ: ದರ್ಬಾರಿಕಾನಡ ಧ್ರುವತಾಳಪರಮ ಬಲವಂತನೆಂಬೊ ಗರ್ವ ತಾಳಿದದಕೆನಿರುಪಮ ನಿರ್ಬಲನಾದೆನಿಂದುಸಿರಿ ಅಜ ಭವರಿಗೆ ಸಿಲುಕದ ಮಹಿಮನ್ನಕರವಶನಾದ ಆಪ್ತನಂಬೊ ಮದದಿಸರಿಗಾಣೆನೆನುತಲಿ ಸಥೆ ಮಾಡಿದವರೆನ್ನುಹರಿ ನಿನ್ನ ಕುರುಹು ಒಮ್ಮೆ ಜನುಮದೊಳಗೆಅರಸಿ ನೋಡಿದರೆ ಕಾಣದಿದ್ದವನಾದೆತರಣೇಂದು ಕೋಟಿ ತೇಜ ಮಹಾರಾಜಾನಿರುಪಮ ಸೌಭಾಗ್ಯವಂತನೆಂದಾದಕೆದಾರಿದ್ರ ದೋಷದಿಂದ ಅಧಿಕನಾದೆನರರಿಂದ ವಂದ್ಯನೆಂದು ಮನದಿ ಹಿಗ್ಗಿದುದಕೆಧರೆಯೊಳು ತೃಣಸಮನಾಗದಾದೆವೀರರಾದವರು ಎದುರು ನಿಲ್ಲರೆಂಬೊ…
