-
Pankaja Mukhiya
Composer : Shri Purandara dasaru , Raga: Shivaranjani , Tala:Adi ಪಂಕಜಮುಖಿಯರೆಲ್ಲರು ಬಂದು ಲಕ್ಷ್ಮೀ ।ವೇಂಕಟ ರಮಣಗಾರತಿಯೆತ್ತಿರೆ ॥ ಪ ॥ ಮತ್ಸ್ಯಾವತಾರಗೆ ಮಂದರೋದ್ಧಾರಗೆ ।ಅಚ್ಚರಿಯಿಂದ ಭೂಮಿ ತಂದವಗೆ ॥ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ।ಲಕ್ಷ್ಮೀನರಸಿಂಹಗಾರತಿಯೆತ್ತಿರೆ ॥ 1 ॥ ವಾಮನ ರೂಪಲಿ ದಾನ ಬೇಡಿದವಗೆ ।ಪ್ರೇಮದಿ ಕೊಡಲಿಯ ಪಿಡಿದವಗೆ ॥ರಾಮಚಂದ್ರನಾಗಿ ದಶಶಿರನನು ಕೊಂದ ।ಸ್ವಾಮಿ ಶ್ರೀಕೃಷ್ಣಗಾರತಿಯೆತ್ತಿರೆ ॥ 2 ॥ ಬತ್ತಲೆ ನಿಂತಗೆ ಬೌದ್ಧಾವತಾರಗೆ ।ಉತ್ತಮ ಅಶ್ವವನೇರಿದಗೆ ॥ಭಕ್ತರ ಸಲಹುವ ಪುರಂದರವಿಠಲಗೆ ।ಮುತ್ತೈದೆಯರಾರತಿಯೆತ್ತಿರೆ…
