-
Neneyiro neneyiro hoonoora
Composer : Shri Prasannavenkata dasaru [on Hunoora Hanuma] ನೆನೆಯಿರೊ ನೆನಯಿರೊ ಹೂನೂರ ಹನುಮನ್ನ |ಅನುವಾಗಿ ವಲಿವಾ ಶ್ರೀ ರಾಮದೂತನ್ನ [ಪ] ವನದಿಯ ಲಂಘಿಸಿ ವನವನವ ಶೋಧಿಸಿ |ವನಜಾಕ್ಷಿ ಪದಕೆರಗಿ ವನಜನಾಭನಂಕಿತದಿ |ದನುಜನಾ ಸಭೆಯೊಳಗೆ ದಲ್ಲಣ ಮೂಡಿಸಿದಾ |ಘನ ಭಕುತಿ ವೈರಾಗ್ಯ ನಿಧಿಯೆನಿಸಿ ಮೆರೆವಾ [೧] ಕುಂತಿಯ ಗರ್ಭದಿ ಅಂತುಜನಿಸಿ ರಕ್ಕಸರ |ಅಂತ್ಯಗೈದು ಶ್ರೀಕಾಂತಗೆ ಪರಮಾಪ್ತನೆನಿಸಿದ ||ಪಂಥವಾಡಿ ದಾಯಾದಿ ಹಂತಕ ಬಲವಂತಾ |ಕಂತುಪಿತನ ಸೇವೆಗೆ ನಿಂತ ಹೂನೂರ ಕಾಂತಾ [೨] ಪಂಚಭೇದ ಪ್ರಪಂಚ ಸತ್ಯವೆಂದೆನ್ನುತಾ |ಮುಂಚಿನ…
