-
Muyyakke muyya teeritu
Composer : Shri Purandara dasaru ದಾಸನಾಗುವುದಕೆ ಏಸು ಜನ್ಮದ ಸುಕ್ರುತಭಾಸುರ ರವಿ ಕೋಟಿ ಶ್ರೀಶ ಗುಣವಂತನಿನ್ನ ದಾಸರ ದಾಸ್ಯವ ಲೇಸಾಗಿ ಕೊಡು ಕಂಡ್ಯಪುರಂದರ ವಿಟ್ಟಲ || ಮುಯ್ಯಕ್ಕೆ ಮುಯ್ಯ ತೀರಿತು – ಜಗ |ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ [ಪ] ಸಣ್ಣವನೆಂದು ನಾ ನೀರು ತಾರೆಂದರೆ |ಬೆಣ್ಣೆಗಳ್ಳ ಕೃಷ್ಣ ಮರವೆ ಮಾಡಿ |ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ |ಕಣ್ಣು ಕಾಣದೆ ನಾ ಟೊಣೆದೆ ಪಂಢರಿರಾಯ [೧] ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ |ವನ್ನು ನೀನಿತ್ತೆ…
