-
Kelidya koutukavannu
Composer : Shri Shripadarajaru ಕೇಳಿದ್ಯಾ ಕೌತುಕವನ್ನು ಕೇಳಿದ್ಯಾ (ಪ) ಕೇಳಿದ್ಯಾ ಕೌತುಕವನ್ನು ನಾಕೇಳಿದೆ ನಿನಗಿಂತ ಮುನ್ನ, ಆಹಾ |ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆ (ಅ|ಪ|) ಕರೆಯ ಬಂದಿಹನಂತೆ ಕ್ರೂರತಮ್ಮ ಕಿರಿಯಯ್ಯನಂತೆ ಅಕ್ರೂರಪುರ ಹೊರವಳಯದಿ ಬಿಟ್ಟು ತೇರ, ಆಹಾ |ಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿ ಕೊಂಡುಮರುಳು ಮಾಡಿದ ಬುದ್ಧಿ (೧) ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ,ಅಲ್ಲಿ ತೋರಿದ ಮನಕೆ ನಾರಿಯ, ಆಹಾ |ಸಾದಿಮಲ್ಲ ಮೊದಲಾದ ಬಿಲ್ಲ…
