-
Karunisu Jayesha Vittala
Composer : Shri Vijayaramachandra vittala dasaru [Ankita pradana haadu] ಕರುಣಿಸು ಜಯೇಶ ವಿಠ್ಠಲ | ವರ ಅಂಕಿತವನು ಇತ್ತೆ |ಪ| ತರಳ ನಿನ್ನವನೆಂದು | ಗುರುವಾತ ಸ್ತಿಥನಾಗಿ |ಭರದಿ ಪಾಲಿಸಿದೆ ಇವನ | ಹರಿ ನೀ ನಿದ್ದೆಡೆಗೆ ಕರೆಸಿ |ಅ.ಪ| ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲ್ಲಿ,ಮರೆಸಿ ಕಾಮ್ಯ ಕರ್ಮಗಳೆಲ್ಲವನ್ನು,ಸ್ಮರಿಸದಂತೆ ಮಾಡು ಪರಸತಿಯರೊಲಿಮೆ,ಮರೆಯದಂತಿರಲಿ ಪರತತ್ವವನ್ನು |೧| ಅತಿಥಿ ಅಭ್ಯಾಗತರ ಪೂಜೆ ಸತಿ ಸುತ ಪರಿವಾರದಿಕೃತ ಕೃತ್ಯನಾಗಿ ಮಾಡಿಸಿ,ಪತಿತರಾ ಸಹವಾಸ ಹಿತವೆಂದರುಪದೇ,ಸದ್ಗತಿ ನೀವ ಮಾರ್ಗವ ತಿಳಿಸಿ |೨|…
