Tag: Hoova taruvara manege

  • Hoova taruvara manege

    Composer : Shri Purandara dasaru ಹೂವ ತರುವರ ಮನೆಗೆ ಹುಲ್ಲ ತರುವಅವ್ವ ಲಕುಮಿ ರಮಣ ಇವಗಿಲ್ಲ ಗರುವ |ಪ| ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವಇಂದಿರಾರಮಣಗೆ ಅರ್ಪಿತವೆನ್ನಲುಒಂದೆ ಮನದಲಿ ಸಿಂಧುಶಯನ ಮುಕುಂದ ಎನೆಎಂದೆಂದು ವಾಸಿಪನಾ ಮಂದಿರದ ಒಳಗೆ |೧| ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿಪರಿಪೂರ್ಣನೆಂದು ಪೂಜೆಯನು ಮಾಡೆಪರಮ ಆಸಕ್ತಿಯಲಿ ಸೇವೆಯನು ಮಾಡಿದರೆಸರಿಭಾಗ ಕೊಡುವ ತನ್ನರಮನೆಯ ಒಳಗೆ |೨| ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದುಪುಂಡರೀಕಾಕ್ಷ ತಾ ಹುಲ್ಲ ತಿನಿಸಿದಅಂಡಜವಾಹನ ಶ್ರೀಪುರಂದರವಿಠ್ಠಲನುತೊಂಡರಿಗೆ ತೊಂಡನಾಗಿ ಸಂಚರಿಸುತಿಹನು |೩| hUva taruvara…

error: Content is protected !!