-
Hannu bandide koLLiri
Composer : Shri Purandara dasaru ಹಣ್ಣು ಬಂದಿದೆ ಕೊಳ್ಳಿರೋ ನೀವೀಗಚೆನ್ನ ಬಾಲಕೃಷ್ಣನೆಂಬೊ ಕೆನ್ನದ ಬಾಳೆ ||ಪ|| ಹವ್ಯಕವ್ಯದ ಹಣ್ಣು, ಸವಿವ ಸಕ್ಕರೆ ಹಣ್ಣುಭವರೋಗಗಳನೆಲ್ಲ ಕಳೆವ ಹಣ್ಣುನವನೀತ ಚೋರನೆಂಬೊ ಜವನ ಅಂಜಿಪ ಹಣ್ಣುಅವನಿಯೊಳು ಶ್ರೀರಾಮನೆಂಬೊ ಹಣ್ಣು |೧| ಕೊಳೆತು ಹೋಗುವುದಲ್ಲ, ಹುಳುತು ಹೋಗುವುದಲ್ಲಕಳೆದು ಬಿಸಾಡಿಸಿ ಕೊಳ್ಳುವುದಲ್ಲಅಳತೆ ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೋದಲ್ಲಒಳಿತಾದ ಹರಿಯೆಂಬೊ ಮಾವಿನ ಹಣ್ಣು |೨| ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲಕಷ್ಟದಿ ಹಣ ಕೊಟ್ಟು ಕೊಂಬುವುದಲ್ಲಸೃಷ್ಟಿಯೊಳಗೆ ನಮ್ಮ ಪುರಂದರವಿಠಲಕೃಷ್ಣರಾಯನೆಂಬೊ ಶ್ರೇಷ್ಠಾದ ಹಣ್ಣು |೩| haNNu baMdide…
