-
Gopaladasara Sripada smarisalu
Composer : Shri Varadagopala vittala ಗೋಪಾಲದಾಸರ ಶ್ರೀಪಾದ ಸ್ಮರಿಸಲು ಆಪತ್ತುಪರಿಹಾರವಾಗುವದು || ಪ || ತರಣಿವುದಿತವಾಗೆ ತಮವು ನಿಲ್ಲುವದುಂಟೆ |ತರಕಿಸುವದು ಯಾತಕೆ |ಪರಮ ಕರುಣಿ ನಮ್ಮ ಗುರುಗಳ ನೆನೆದರೆ |ತ್ವರಿತದಲ್ಲೋಡುವವು ದುರಿತ ರಾಶಿಗಳು || ೧ || ಪವಿಗೆ ಮಣಿಯದ ಪರ್ವತಗಳುಂಟೆ ಮಹ |ಪವನಕೆ ಪಟ ನಿಲ್ಲುವುದುಂಟೆ |ಕರಿರಾಜ ಭಾಗಣ್ಣ ರಾಯರ ನೆನೆದರೆ |ಕವಿವವೆ ಕಲಿಮಲ ಕಲುಷಗಳು ||| ೨ || ಕರಿಯುಸಿಂಹನ ಕೂಡ ಕಾದಿಗೆಲಿದುದುಂಟೆಕುರಿಯು ತರಕ್ಷುನ ತರಬಲುಂಟೆ |ಗುರು ಸ್ಮರಣಿಯು ಮನದಲಿ ಗುರುತಿಟ್ಟದೆದುರಿತಗಳುಂಟೆ ದುರುಳಮತಿಯೆ…
