-
Gajanana Stotra Suladi – Abhinava Pranesha vittala
ಶ್ರೀಗಜಾನನ ಸುಳಾದಿರೂಪ ಸ್ತೋತ್ರ( ಅಭಿನವ ಪ್ರಾಣೇಶವಿಠಲ ದಾಸರ ರಚನೆ ) ರಾಗ : ರೇವತಿ ಧ್ರುವತಾಳಕರಿರಾಜ ಕಂಧರ ರಜತಾದ್ರಿ ಮಂದಿರ |ಉರಗ ಕಟಿಬಂಧನ ಮೂಷಿಕಶ್ಯಂದನ |ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |ಕರ ಚತುಷ್ಟಯ ದಶನ ಮೋದಕ ಪಾಶಾಂಕುಶ |ಧರ ಕುಂಕುಮಾಂಬರ ಲಂಬೋದರ |ಶೂರ್ಪಕರ್ಣನೆ ಮಂಗಳಾಂಗ ಭಸ್ಮಾಂಗನೆ |ಧರಿಪ ಭಂಜನ ಖಳ ಪೂರ್ವದೇವತೆಗಳ |ಹರಿ ವಿಶ್ವ ಅಭಿನವ ಪ್ರಾಣೇಶವಿಠಲನ |ಚರಣ ವಾರಿಜ ಭೃಂಗ ನತದಯಾಪಾಂಗ || ೧ || ಮಟ್ಟತಾಳಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ |ಚಾರುದೇಷ್ಣನೆಂಬ ನಾಮದಲವತರಿಸಿ |ಗೌರಿವರನ…
