-
Dhaniya nodideno
Composer : Shri Purandara dasaru ದರಿದ್ರರೆನಬಹುದೆ ಹರಿದಾಸರಸಿರಿವಂತರೆನಬಹುದೆ ಹರಿದ್ರೋಹಿಗಳಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲವುಪುರಂದರ ವಿಠಲನಾಳ್ಗಳ್ಗೆಎಲ್ಲಿಹುದೈ ಮಾನ ಅಭಿಮಾನ ಜಗದಿ || ಧಣಿಯ ನೋಡಿದೆನೋ ವೆಂಕಟನ , ಮನ-ದಣಿಯ ನೋಡಿದೆನೊ ಶಿಖಾಮಣಿ ತಿರುಮಲನ |ಪ| ಚರಣದಂದುಗೆ ಗೆಜ್ಜೆಯವನ , ಪೀತಾಂ-ಬರ ಉಡಿಗೆ ಒಡ್ಯಾಣವಿಟ್ಟಿಹನಮೆರೆಯುವ ಮಾಣಿಕ್ಯದವನ , ಚೆನ್ನಸರ ಹಾರ ಪದಕ ಕೌಸ್ತುಭ ಧರಿಸಿದನ |೧| ಕೊರಳೊಳು ವೈಜಯಂತಿ ಧರಿಸೀಹನ , ಕಿರುಬೆರಳ ಮುದ್ರಿಕೆ ಭುಜ ಕೀರ್ತಿಲೊಪ್ಪುವನಅರಳು ಕಂಗಳ ನೋಟದವನ , ಸುಳಿ-ಗುರುಳು ನೊಸಲ ಪಟ್ಟಿ ನಾಮ…
