-
Mangalam – Dayadi Bhaktara
Composer : Shri Jagannatha dasaru ರಾಗ: ಆನಂದಭೈರವಿ , ರೂಪಕತಾಳ ಜಯಮಂಗಳಂ ನಿತ್ಯ ಶುಭಮಂಗಳಂ ।ದಯದಿ ಭಕ್ತರ ಕಾವ ದಾಶರಥಿಗೆ ॥ ಪ ॥ ಅವನಿಜಾ ವಲ್ಲಭಗೆ ಪವನಾತ್ಮಜನ ಸಖಗೆ ।ಪ್ಲವಗನಾಯಕರಾಳ್ದ ರವಿಜನುತಗೆ ॥ಶಿವನ ವರ ಪಡದಕ್ಷಕುವರ ಮುಖ ರಕ್ಕಸರ ।ಬವರ ಮುಖದಲಿ ಸದೆದ ಪ್ರವಿತತನಿಗೆ ॥ 1 ॥ ಪಾವಮಾನಿಯ ಹೆಗಲನೇರಿ ಅತಿ ಹರುಷದಲಿ ।ರಾವಣಾದ್ಯರ ಸದೆದ ರಘುರಾಮಗೆ ॥ಭಾವಿಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು – ।ಗ್ರೀವಾದಿಗಳಿಗೆ ಮುಕ್ತಿಯ ನೀಡ್ದಗೆ ॥ 2 ॥…
