-
Dasaraya vijaya dasaraya
Composer : Shri Shyamasundara dasaru ದಾಸರಾಯ ವಿಜಯ ದಾಸರಾಯ |ದೋಷವೆಣಿಸದೆ ಸದಾ ಪೋಷಿಸು ಕರುಣದಿ [ಪ] ಸಕಲ ಜಗತ್ತಿಗೆ ಲಕುಮೀಶ ಪರನೆಂದುಮಖವ ರಚಿಪ ಮುನಿ ಕರಕ್ಕೆ ಸಾರಿದ (ಅ.ಪ) ಕ್ಷಿತಿ ಸುರವರ ಮಧ್ವಪತಿ ನಾಮದಿಂದಲಿ |ಶತಕ್ರತು ರಾಯರ ಸುತನಾಗಿ ಜನಿಸಿದ |ಬೇಸಿಗೆ ಬಿಸಿಲೊಳು ರಾಸಭ ತೃಷೆಯಿಂದ |ಘಾಸಿಯಾಗಿರೆ ಜಲ ಪ್ರಾಶನಗೈಸಿದ |೧| ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ |ಇಷ್ಟಾರ್ಥ ಗರೆಯುವ ಪುಟ್ಟ ಬದರಿವಾಸ |ಮೋದ ತೀರ್ಥಾಗಮ ಮರ್ಮ ಮಧುರ ಕನ್ನಡದಲ್ಲಿವಿಧ ವಿಧ ರಚಿಸಿದ ಸದಮಲ ಸುಚರಿತ್ರ…
