Tag: Bharathikanta Jaya bheema

  • Bharathikanta Jaya bheema

    Composer : Shri Prasannavenkata dasaru ಭಾರತಿ ಕಾಂತಾ ಜಯಭೀಮ ಬಲವಂತಾಅರಿಷಿಣಗುಡಿಯರಸ ಆನಂದತೀರ್ಥಾ [ಅ.ಪ] ಹರುಷದಲಿ ನಿನ್ನಾ ಹೃದಯ |ತೆರೆದು ತೋರಿಸಿದ್ಯೋ ರಾಮನ್ನ ||ಅರೆಕ್ಷಣದಿ ಅವುಷದಿಯ ಮರತಂದು |ಅರಜೀವಗಳ ಪೊರೆದ್ಯೋ ಹನುಮಾ [೧] ಮುಡಿಸಿದ್ಯೋ ಮಡದಿಗೆ ಹೂವಾ ಇರಿಸಿದೆ |ಕಡಲಶಯನನಲಿ ನಿಜ ಭಾವಾ |ತುಡುಕಿ ಕೌರವರ್ಹೆಡೆಮುರಿಕಟ್ಟಿ ತ್ವರದಿ |ಉಡುಪಿಕೃಷ್ಣನ ಪ್ರೀತಿ ಪಡೆದ ಭೀಮಾ [೨] ಧರೆಸಿ ಮೂರಾವತಾರ ಧರೆಯೊಳಗೆ |ಮೆರೆದ್ಯೋ ಹರಿದಾಸ ಧೀರಾ |ಸಿರಿಪ್ರಸನ್ವೆಂಕಟರಾಯನ್ನ ನಿಜರೂಪ |ಅರಿತ ಆನಂದ ಮುನಿ ರನ್ನ ಘನ್ನ [೩] BArati kAMtA…

error: Content is protected !!