-
Bandaddella barali Govindana
Composer : Shri Purandara dasaru ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ ||ಪ|| ಇಂದಿರೆ ರಮಣನ ಧ್ಯಾನವ ಮಾಡಲುಬಂದ ದುರಿತ ಭಯ ಹಾದು ಬಿಡಲಿ ||ಅ.ಪ|| ಅರಗಿನ ಮನೆಯೊಳಗಂದುಪಾಂಡವರನು ಕೊಲಬೇಕೆಂದುದುರುಳ ಕೌರವ ಬಂದು ಅತಿಹರುಷದಲಿರುತಿರಲಂದು ||ಹರಿಕೃಪೆ ಅವರಲ್ಲಿದ್ದ ಕಾರಣಘೋರ ದುರಿತ ಭಯ ಹಾದುದಲ್ಲವೆ [೧] ಆರು ಒಲಿಯದಿರಲೆನ್ನಮುರಾರಿ ಎನಗೆ ಪ್ರಸನ್ನಓರುವ ದುರಿತವೆಲ್ಲ ನಿವಾರಿಪಕರುಣ ಸಂಪನ್ನ ||ಶ್ರೀರಮಣನ ಸಿರಿ ಚರಣ ಶರಣರಿಗೆಕ್ರೂರ ಯಮನು ಶರಣಾಗತನಲ್ಲವೆ [೨] ಸಿಂಗನ ಪೆಗಲೇರಿದವಗೆ –ಕರಿಭಂಗವೇಕೆ ಮತ್ತವಗೆ |ರಂಗನ ಕೃಪೆಯುಳ್ಳವಗೆ –ಭವ ಭಂಗಳೇತ್ತಕವಗೆ…
