Tag: Avareetiyinda Nee

  • Avareetiyinda nee enna

    Composer : Shri Vadirajaru ಆವ ರೀತಿಯಿಂದ ನೀಯೆನ್ನ ಸಲಹುವಿ |ಶ್ರೀವಿಭು ಹಯವದನ ||ಪ|| ಈ ವಿಧ ಭವದೊಳು ಇಷ್ಟು ಬವಣೆ ಪಟ್ಟೆತಾವರೆದಳನಯನ ಹಯವದನ ||ಅ|| ಅಂಗನೆಯರಲ್ಲಿ ಅಧಿಕ ಮೋಹದಿಂದಅಂಗಶೃಂಗಾರ ಮಾಡಿ |ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ |ಭಂಗಕ್ಕೆ ಗುರಿಯಾದೆನೊ, ಹಯವದನ ||೧|| ಕಾಮನ ಬಾಧೆಯ ತಾಳಲಾರದೆ ಕಂಡ |ಕಾಮಿನಿಯರನು ಕೂಡಿ |ನೇಮ ನಿಷ್ಠೆಯ ಬಿಟ್ಟು, ನಿನ್ನನೆ ಭಜಿಸದೆ |ಪಾಮರನಾದೆನೊ, ಹಯವದನ ||೨|| ಹೀನಗುಣಗಳೆಲ್ಲ ಹಯಮುಖ ದೇವನೆ |ನೀನೆಣಿಸದಲೆ ಕಾಯೊ |ಜ್ಞಾನಿಗಳರಸನೆ ದಯವಿಟ್ಟು ನಿನ್ನನ್ನೇ |ಧ್ಯಾನಿಸುವಂತೆ ಮಾಡೋ,…

error: Content is protected !!