Tag: Aru ninagidiradhika

  • Aru ninagidiradhika

    Composer : Shri Vyasarajaru ಆರು ನಿನಗಿದಿರಧಿಕ ಧಾರುಣಿಯೊಳಗೆಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ [ಪ] ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊರ್ಧ್ವ ಪುಂಢ್ರಗಳ ಇಡಿಸಿಆರುಮೂರರ ಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ [೧] ಆರುನಾಲ್ಕು ತತ್ವ-ದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ [೨] ಆರಾರುಮೇಲೊಂದು ಅಧಿಕಲೆಕ್ಕದ ಗ್ರಂಥ-ಸಾರವನು ರಚಿಸಿ ಸಜ್ಜನಿರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದಉದಾರ ಶ್ರೀಕೃಷ್ಣನ ದಾಸರೊಳು ದೊರೆಯೆ [೩] Aru ninagidiradhika dhAruNiyoLagesAra SAstravanoreda sarvaj~ja munirAya [pa] AroMdu vairigaLa…

error: Content is protected !!